ಪಾಕುಡ್: ಕೌಟುಂಬಿಕ ಕಲಹಕ್ಕೆ ಬೇಸತ್ತಾ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ನಂತರ ತನ್ನ ಸೊಸೆಯನ್ನು ತನ್ನತ್ತ ಎಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಾರ್ಖಂಡ್ನ ಸಿದ್ಧಾರ್ಥ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಗಾಯಗೊಂಡಿರುವ ಶಂಕರ್ ಸೆನ್ ಮಂಡಲ್ (70) ಹಾಗೂ ಆತನ ಸೊಸೆ ಬುಲ್ಬುಲ್ ಮಂಡಲ್(30) ಎಂದು ತಿಳಿದುಬಂದಿದೆ.
ಮೊದಲು ತಾನು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಶಂಕರ್ ನಂತರ ತನ್ನ ಸೊಸೆಯನ್ನು ತನ್ನತ್ತ ಎಳೆದು ಬೆಂಕಿತಾಗುವಂತೆ ಮಾಡಿದ್ದಾನೆ . ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯವಾಗಿದ್ದು, ನಗರದ ಸದರ್ ಆಸ್ಪತ್ರಗೆ ದಾಖಲಿಸಲಾಗಿದೆ.
ಶಂಕರ್ ಸೆನ್ ಮಂಡಲ್ನ ಮಗ ಕೆಲವುದಿನಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈ ವಿಚಾರಕ್ಕೆ ಕುಟುಂಬಲ್ಲಿ ಆಗಾಗ್ಗೆ ಜಗಳ ನಡೆಯುತ್ತಿದ್ದವು, ಆತನ ಸೊಸೆ ಸಣ್ಣ ಸಣ್ಣ ವಿಚಾಕ್ಕೆ ತನ್ನನ್ನು ಹಿಯಾಳಿಸುತ್ತಿದ್ದಳು ಎಂದು ಆತ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಜೊತೆಗೆ ಬುಲ್ಬುಲ್ ಮಂಡಲ್ ಹಾಗೂ ಆಕೆಯ ತಾಯಿ ನನ್ನ ಮೇಲೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಪ್ರಯತ್ನಿಸಿದರು ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಬುಲ್ಬುಲ್ ತಮ್ಮ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಮೊದಲು ಶಂಕರ್ ಬೆಂಕಿ ಹಚ್ಚಿಕೊಂಡು ನಂತರ ತನ್ನ ಅಕ್ಕನನ್ನು ಬೆಂಕಿಯೊಳಗೆ ಎಳೆದುಕೊಂಡಿಡನು ಎಂದು ತಿಳಿಸಿದ್ದಾನೆ