
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಇದೀಗ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದಾಗಲೇ ’ಲಂಡನ್ ನಲ್ಲಿ ಲಂಬೋದರ’ ಹೆಸರಿನ ಚಿತ್ರದಲ್ಲಿ ನಟಿಸಿರುವ ಶ್ರುತಿಗೆ ಈಗ ಎರಡನೇ ಚಿತ್ರದಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ಸಿಕ್ಕಿದೆ. ರಾಮ್ ವಿನಯ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ಹರ್ಷನ್ ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ.
ಹರ್ಷನ್ ಗೌಡ ’ಕಾಡು ಮಳೆ’[ ಎನ್ನುವ ಚಿತ್ರದಲ್ಲಿ ನಟಿಸಿದ್ದು ಇದೀಗ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ.
ರಾಮ್ ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದುನಿರ್ಮಾಪಕ ಜಗದೀಶ್ ಎಸ್ ಟಿ ಗೌಡ ಇವರ ಬೆಂಬಲದಿಂದ ಚಿತ್ರ ನಿರ್ದೇಶನದ ಕನಸು ಸಾಕಾರಗೊಳ್ಳುತ್ತಿದೆ ಎಂದಿದ್ದಾರೆ.”ನಾನು ಸಾಕಷ್ಟು ಕಿರುಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ಇದು ನನ್ನ ಮೊದಲ ಚಲನಚಿತ್ರವಾಗಿದೆ.’ಫಿದಾ’ ಎಂದು ಇದಕ್ಕೆ ನಾಮಕರಣ ಂಆಡಲಾಗಿದ್ದು ಇದುತೆಲುಗಿನಲ್ಲಿ ವರುಣ್ ತೇಜ, ಸಾಯಿ ಪಲ್ಲವಿ ನಟಿಸಿದ ಚಿತ್ರದ ನೆನಪು ತರುತ್ತದೆ.ಈ ಶೀರ್ಷಿಕೆ ಕಥೆಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಎನ್ನುವ ಕಾರಣ ಇದನ್ನು ಆಯ್ಕೆ ಮಾಡಿಕೊಂಡಿದ್ದೇನೆ.” ನಿರ್ದೇಶಕ ಹೇಳಿದ್ದಾರೆ. 2009 ರಲ್ಲಿ ಮೈಸೂರಿನಲ್ಲಿ ನಡೆದ ನೈಜ ಘಟನೆಯಾಧರಿಸಿದ ಚಿತ್ರ ಇದಾಗಿದೆ.
“ನಾನು ಕಳೆದ ಎರಡೂ ವರೆ ವರ್ಷಗಳಿಂದ ಈ ಚಿತ್ರಕಥೆಗಾಗಿ ಕೆಲಸ ಮಾಡುತ್ತಿದ್ದೇನೆ.ನಿರ್ಮಾಪಕರಿಗೆ ಚಿತ್ರದ ಟ್ರೈಲರ್ ಬಗೆಗೆ ಹೇಳಿದಾಗಲೇ ಅವರು ಕಥೆಯಿಂದ ಪ್ರಭಾವಿತರಾಗಿ ಬಂಡವಾಳ ಹೂಡಿಕೆಗೆ ಸಮ್ಮತಿಸಿದರು.ಶ್ರೀ ಅಂಜನಾದ್ರಿ ಸಿನಿಮಾಸ್ ಬ್ಯಾನರ್ ನಲ್ಲಿ ಈ ಚಿತ್ರ ತಯಾರಾಗುತ್ತಿದೆ” ರಾಮ್ ಹೇಳುತ್ತಾರೆ.
ಆಗಸ್ಟ್ 17ಕ್ಕೆ ಚಿತ್ರದ ಫೋಟೋ ಶೂಟ್ ಗೋವಾದಲ್ಲಿ ನಡೆಯಲಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಕಾರ್ಯ ಪ್ರಾರಂಭವಾಗಲಿದೆ.”ಪ್ರಮುಖ ಪಾತ್ರಗಳು ಸೇರಿ ಎಲ್ಲಾ ಸಹ ನಟರು, ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.ಇದೇ ವೇಳೆ ಶ್ರುತಿ ತನ್ನ ಮೊದಲ ಚಿತ್ರದ ನಟನೆಯನ್ನು ಅಂತಿಮಗೊಳಿಸುವುದುಅನ್ನೇ ನಾವು ಕಾಯುತ್ತಿದ್ದೇವೆ.ಒಟ್ಟಾರೆ ಸಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ ಎಂದು ನಿರ್ದೇಶಕರು ನುಡಿದರು.