ನನ್ನ ಮಾಹಿತಿ ‘ಸಂಶೋಧನೆ’ ಆಗಿಲ್ಲ: ಟ್ರಾಯ್‌ ಮುಖ್ಯಸ್ಥ

ಹೊಸದಿಲ್ಲಿ: ಟ್ವಿಟರ್‌ನಲ್ಲಿ ಆಧಾರ್‌ ಸಂಖ್ಯೆಯನ್ನು ಬಹಿರಂಗಪಡಿಸಿ, ಹ್ಯಾಕರ್‌ಗಳಿಗೆ ಸವಾಲೆಸೆದು ವಿವಾದ ಸೃಷ್ಟಿಸಿದ್ದ ದೂರಸಂಪರ್ಕ ನಿಯಂತ್ರಕ ಟ್ರಾಯ್‌ ಮುಖ್ಯಸ್ಥ ಆರ್‌.ಎಸ್‌ ಶರ್ಮಾ, ಆಧಾರ್‌ ಸಂಖ್ಯೆಯನ್ನು ಹೀಗೆ ಕೊಟ್ಟಿದ್ದರಿಂದ ತಮ್ಮ ಯಾವುದೇ ಮಾಹಿತಿ ‘ ಸಂಶೋಧನೆ’ಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಹೀಗಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಸಂಕೀರ್ಣವಾದ ನೀತಿಗಳ ಬಗ್ಗೆ ಚರ್ಚೆ ಮಾಡುವುದು ಸಮಂಜಸವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

” ಆಧಾರ್‌ನಿಂದ ನನ್ನ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಆ ಮಾಹಿತಿಗಳನ್ನು ಆಧಾರ್‌ ಇಲ್ಲದೆಯೂ ಪಡೆಯಬಹುದು” ಎಂದು ಶರ್ಮಾ ಹೇಳಿದ್ದಾರೆ. ಕಳೆದ ತಿಂಗಳು ಶರ್ಮಾ ತಮ್ಮ ಆಧಾರ್‌ ಚಾಲೆಂಜ್‌ ಹಾಕಿದ ನಂತರ ಹ್ಯಾಕರ್‌ಗಳು ಶರ್ಮಾ ಅವರ ಬ್ಯಾಂಕ್‌ ಖಾತೆ ವಿವರಗಳು ಲಭಿಸಿವೆ ಎಂದು ಹೇಳಿಕೊಂಡಿದ್ದರು. ಯುಐಡಿಎಐ ಸಾರ್ವಜನಿಕರಲ್ಲಿ ಆಧಾರ್‌ ಸಂಖ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸದಂತೆ ನಂತರ ಮನವಿ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ