ಬೆಂಗಳೂರು: ಬಾಂಬ್ ಸ್ಫೋಟಗಳಿಂದ ಸಿಲಿಕಾನ್ ಸಿಟಿ ಬಚಾವಾಗಿದ್ದು, ಮುನೀರ್ ಬಂಧನದಿಂದ ಬಾಂಬ್ ಸ್ಫೋಟದ ಸಂಚು ವಿಫಲವಾಗಿದೆ. ರಾಮನಗರದಲ್ಲಿ ಬಂಧಿತನಾಗಿರುವ ಉಗ್ರ ಜಹೀದುಲ್ ಇಸ್ಲಾಂ ಅಲಿಯಾಸ್ ಮುನೀರ್ ಶೇಖ್ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಬಯಲಾಗಿದೆ.
ಬೋದ್‍ಗಯಾ ಬ್ಲಾಸ್ಟ್ ಬಳಿಕ ಬೆಂಗಳೂರಿನಲ್ಲಿ ಸ್ಫೋ
ಟ ನಡೆಸಲು ಮುನೀರ್ ಸ್ಕೆಚ್ ರೂಪಿಸಿದ್ದ. ಆರಂಭದಲ್ಲಿ ಬೆಂಗಳೂರಿನ ಕೆ.ಆರ್ ಪುರಂ, ವೈಟ್ ಫೀಲ್ಡ್ ಅಲ್ಲಿ ವಾಸವಾಗಿದ್ದ ಮುನೀರ್ ರಾಮನಗರಕ್ಕೆ ಬಳಿಕ ರಾಮನಗರಕ್ಕೆ ಶಿಫ್ಟ್ ಆಗಿದ್ದನು.
ಈತ 2018 ಮೇ ಅಲ್ಲಿ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಎರಡು ಜನನಿಬಿಡ ಜಾಗದಲ್ಲಿ ಬ್ಲಾಸ್ಟ್ ಮಾಡಲು ಹೊಂಚು ಹಾಕಿದ್ದನು. ರಾಮನಗರದಿಂದ ಬೆಂಗಳೂರಿಗೆ ದಿನ ಬೆಳಗ್ಗೆ ಬಂದು ಬೆಂಗಳೂರಿನ ಬೀದಿ ಬೀದಿಯಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಮುನೀರ್ ಪ್ರಾಯೋಗಿಕವಾಗಿ ಕಚ್ಚಾ ಬಾಂಬ್ ಬ್ಲಾಸ್ಟ್ ಮಾಡಲು ದಿನಗಣನೆ ಮಾಡಿದ್ದನು. ಈತ ಕೆಲಸ ಮುಗಿಸಿ ಡಿಸೆಂಬರ್ ಅಲ್ಲಿ ವಾಪಸ್ ಹೋಗಲು ಸ್ಕೆಚ್ ಹಾಕಿದ್ದನು ಎಂದು ತಿಳಿದು ಬಂದಿದೆ.
ರಾಮನಗರದಲ್ಲಿ ಸಿಕ್ಕಿದ್ದು ಹೇಗೆ?
ಬಿಹಾರದ ಬೋದ್‍ಗಯಾ ಚಾಲಚಕ್ರ ಮೈದಾನದಲ್ಲಿ 2018 ಜುಲೈ 19ರಂದು ಐಇಡಿ ಪ್ಲಾಂಟ್ ಮಾಡಲಾಗಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ನಂತರ ಆಗಸ್ಟ್ 3ರಂದು ಬಾಂಗ್ಲಾದೇಶದ ಅಬ್ದುಲ್ ಕರೀಂ ಮತ್ತು ಮುಸ್ತಾಫಿಜುರ್ ರೆಹಮಾನ್‍ನನ್ನು ಪೊಲೀಸರು ಬಂಧಿಸಿದ್ದರು. ಇವರು ಕೇರಳದ ಮಲಪ್ಪುರಂನಲ್ಲಿರುವ ಬಂಗಾಳಿ ಮಾತನಾಡುವ ಕಾರ್ಮಿಕರ ಕ್ಯಾಂಪ್‍ನ
ಲ್ಲಿ ತಲೆಮರೆಸಿಕೊಂಡಿದ್ದನು. ನಂತರ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಪೊಲೀಸರು ಬಂಧಿತ ಆರೋಪಿಗಳಿಂದ ಬೋದ್‍ಗಯಾದಲ್ಲೇ ಬಾಂಬ್ ಸ್ಫೋಟಿಸಲು ಇಟ್ಟುಕೊಂಡಿದ್ದ ಸರ್ಕೂಯಟ್ ಡಿಸೈನ್ ಮತ್ತೊಮ್ಮೆ ವಶಪಡಿಸಿಕೊಳ್ಳಗಾಗಿತ್ತು. ನಂತರ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿ ಜಹೀದುಲ್ ಇಸ್ಲಾಂ ಮತ್ತು ಆದಿಲ್‍ನನ್ನು ಬಂಧಿಸಲಾಗಿದೆ ಎಂದು ಎನ್‍ಐಎ ತಿಳಿಸಿದೆ.
95 ವರ್ಷ ಜೈಲು ಶಿಕ್ಷೆ:
ಬೋದಗಯಾ ಸ್ಫೋಟ ಮತ್ತಿತರ ಪ್ರಕರಣದಲ್ಲಿ ಮುನೀರ್ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಮತ್ತು ಲುಕ್ ಔಟ್ ಸರ್ಕುಯಲರ್ ಹೊರಡಿಸಲಾಗಿತ್ತು. ಅಷ್ಟೇ ಅಲ್ಲದೇ ಬಾಂಗ್ಲಾದೇಶದಲ್ಲಿ ಸರಣಿ ಸ್ಫೋಟ ಪ್ರಕರಣಗಳಲ್ಲಿ ಜಹೀದುಲ್ ಮೋಸ್ಟ್ ವಾಂಟೆಡ್ ಆಗಿದ್ದಾನೆ. ಉಗ್ರ ಚಟುವಟಿಕೆ ಪ್ರಕರಣವೊಂದರಲ್ಲಿ ಈತನಿಗೆ ಒಟ್ಟು 95 ವರ್ಷ ಜೈಲು ಶಿಕ್ಷೆಯಾ
ಗಿದೆ. ಒಂದು ಕೊಲೆ ಪ್ರಕರಣದ ವಿಚಾರಣೆ ಬಾಕಿ ಇದೆ. 2014ರಲ್ಲಿ ಬಾಂಗ್ಲಾದೇಶದ ಪೊಲೀಸರ ವಶದಲ್ಲಿದ್ದಾಗ ತಪ್ಪಿಸಿಕೊಂಡು ಭಾರತಕ್ಕೆ ನುಸುಳಿದ್ದನು. ರಾಮನಗರದಲ್ಲಿ ಜಹೀದುಲ್ ಇಸ್ಲಾಂ ಮನೆಯಲ್ಲಿ ಸ್ಫೋಟಕದ ಕೆಲವು ಸಾಮಾಗ್ರಿ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ ಎಂದು ಎನ್‍ಐಎ ಮಾಹಿತಿ ನೀಡಿದೆ.
ದಕ್ಷಿಣ ಭಾರತದ ರಾಜ್ಯಗಳು ಅಡಗುತಾಣ
ಬೆಂಗಳೂರು, ರಾಮನಗರ ಮತ್ತು ತುಮಕೂರಿನಲ್ಲಿ ಉಗ್ರರು ತಲೆ ಬಚ್ಚಿಕೊಂಡು ಜನ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದರು. ಉತ್ತರ ಭಾರತ ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಿ, ಯಾರ ಕೈಗೂ ಸಿಗದಂತೆ ಗೌಪ್ಯವಾಗಿ ಅವಿತುಕೊಳ್ಳಲು ಉಗ್ರರ ಪಾಲಿಗೆ ದಕ್ಷಿಣ ಭಾರತದ ರಾಜ್ಯಗಳು ಸುರಕ್ಷಿತ ಸ್ಥಳಗಳಾಗಿವೆ. ಚರ್ಚ್‍ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಆರೋಪಿಯೊಬ್ಬ ಕೃತ್ಯ ನಡೆಸಿದ ನಂತರ ಹೊಸೂರು ರಸ್ತೆ ಪರಪ್ಪನ ಅಗ್ರಹಾರ ಬಳಿ 2 ವರ್ಷಗಳ ಕಾಲ ಕೂಲಿ ಕೆಲಸ ಮಾಡಿಕೊಂಡಿದ್ದನು. ಅದೇ ರೀತಿ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣದ ಕೆಲ ಆರೋಪಿಗಳು, ತುಮಕೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಸಾಮಾನ್ಯರಂತೆ ಇದ್ದರು.