ರೂಪದರ್ಶಿಯರು ಚಿತ್ರ ನಟಿಯರು ಆಗುವುದು ಸಾಮಾನ್ಯ. ರ್ಯಾಂಪ್ ಮೇಲೆ ವಾಕ್ ಮಾಡುತ್ತಿದ್ದ ರೂಪದರ್ಶಿಯೊಬ್ಬರು ಸ್ಯಾಂಡಲ್’ವುಡ್’ಗೆ ಮಹಿಳಾ ನಿರ್ದೇಶಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಸಾವರಿ ಚಿತ್ರದ ಮೂಲಕ ರೂಪದರ್ಶಿ ರೋಶಿನಿಯವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಪಳಗಿ ಹೆಸರು ಮಾಡಿರುವ ರೋಶಿನಿ ಅವರು, ಅಪರೂಪದ ಮಹಿಳಾ ಪ್ರಧಾನ ಕಥೆಯ ಮೂಲಕ ಚಿತ್ರರಂಗದಲ್ಲಿ ತಮ್ಮ ಚೊಚ್ಚಲ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಚಿತ್ರವು ಪ್ರಯೋಗಾತ್ಮಕ ಮಹಿಳಾ ಪರ ಸಿನಿಮಾ ಎಂದು ಹೇಳಲಾಗುತ್ತಿದ್ದು, ತಾವೇ ಕಥೆ ಬರೆದಿರುವ ರೋಶಿನಿಯವರು ಚಿತ್ರಕ್ಕೆ ಹಿಂದೂಸ್ಥಾನಿ ರಾಗ ‘ಅಸಾವರಿ’ ಎಂದು ನಾಮಕರಣ ಮಾಡಿದ್ದಾರೆ. ಚಿತ್ರಕಥೆ ಪೂರ್ಣಗೊಳಿಸಿರುವ ರೋಶಿನಿ ಅವರು ಸಂಭಾಷಣೆ ಬರೆಯುವ ಕಾರ್ಯದಲ್ಲಿ ತೊಡಗಿದ್ದಾರೆ.
ವೀರ ಮಹಿಳೆಯರು ನಮ್ಮಲ್ಲಿದ್ದಾರೆ. ಈಗಾಗಲೇ ಚಿತ್ರಕ್ಕೆ ತಾರಾಗಣದ ಆಯ್ಕೆಗಳು ನಡೆಯುತ್ತಿವೆ. ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಮುಖ್ಯ ನಾಯಕಿಯೊಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ರೋಶಿನಿಯವರು ಹೇಳಿದ್ದಾರೆ.
ಚಾಲೆಂಜಿಗ್ ಸ್ಟಾರ್ ದರ್ಶನವ ಅವರ ಪ್ರಸ್ತುತತೆಯಲ್ಲಿ ಚಿತ್ರ ಹೊರ ಬರುತ್ತಿರುವುದು ವಿಶೇಷವಾಗಿದೆ. ಯುವ ನಿರ್ದೇಶಕಿಯಾಗಿರುವ ರೋಶಿನಿ ಹಾಗೂ ಚಿತ್ರದ ತಂಡ ಈಗಾಗಲೇ ದರ್ಶನ್ ಅವರನ್ನು ಭೇಟಿ ಮಾಡಿ, ಚಿತ್ರ ಕಥೆಯನ್ನು ಹೇಳಿದ್ದು, ಚಿತ್ರಕ್ಕೆ ದರ್ಶನ್ ಅವರು ಬೆಂಬಲ ನೀಡಿದ್ದಾರೆ.
ಒಬ್ಬ ಸ್ಟಾರ್ ನಟ ನಮ್ಮ ಚಿತ್ರಕ್ಕೆ ಬೆಂಬಲ ನೀಡುತ್ತಿರುವುದು ದೊಡ್ಡ ಸಾಧನೆಯಾಗಿದೆ. ಇದು ಚಿತ್ರದ ಮೊದಲ ಗೆಲುವಾಗಿದೆ. ಚಿತ್ರದ ಕಥೆ ವಿಶೇಷವಾಗಿದ್ದು, ಈ ವರೆಗೂ ಯಾರೂ ಹೇಳದ ಕಥೆ ಇದಾಗಿದೆ ಎಂದು ರೋಶಿನಿ ಹೇಳಿದ್ದಾರೆ.
ತಾರಾಗಣ ಆಯ್ಕೆ ಪೂರ್ಣಗೊಂಡ ಬಳಿಕ ಸೆಪ್ಟೆಂಬರ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ. ಚಿತ್ರಕ್ಕೆ ವಿಕ್ರಮ್ ಚೇತನ್ ಸಂಗೀತ ನೀಡಲಿದ್ದಾರೆಂದು ತಿಳಿಸಿದ್ದಾರೆ.
ವಿಕ್ರಮ್ ಅವರು ಸಂಗೀತ ಕಟ್ಟಿಯವರ ವಿದ್ಯಾರ್ಥಿಯಾಗಿದ್ದು, ಎಆರ್. ರೆಹಮಾನ್ ತಂಡದಲ್ಲಿ ಒಬ್ಬರಾಗಿದ್ದಾರೆ. ಮಾನ್ಸೂನ್ ಶೂಟೌಟ್ ಎಂಬ ಅನುರಾಗ್ ಕಶ್ಯಪ್ ಅವರ ಬಾಲಿವುಡ್ ಚಿತ್ರದಲ್ಲಿ ವಿಕ್ರಮ್ ಹೆಸರು ಮಾಡಿದ್ದಾರೆ.