
ಬೆಂಗಳೂರು: ಧ್ರುವ ಸರ್ಜಾ ಹೆಸರು ಕೇಳುತ್ತಲೇ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಮುಂದಿನ ಚಿತ್ರ “ಪೊಗರು” ಚಿತ್ರದ ಕುರಿತು ಮಾಹಿತಿ ತಿಳಿದುಕೊಳ್ಳುವುದಕ್ಕೆ ಹಾತೊರೆಯುತ್ತಾರೆ. ನಂದ ಕಿಶೋರ್ ನಿರ್ದೇಶನದ ಈ ಚಿತ್ರದ ಸ್ಕ್ರಿಪ್ಟ್ ಉತ್ತಮವಾಗಿದೆ ಎಂದು ನಮ್ಮ ಮೂಲಗಳು ಹೇಳಿದೆ.
“ಸಧ್ಯ ನಾನು ನನ್ನ ಕೆಲಸ ಮಾಡಿದ್ದೇನೆ.ಆಗಸ್ಟ್ ಅಂತ್ಯಕ್ಕೆ ಚಿತ್ರತಂಡವು ಎರಡನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ. ಇದಕ್ಕೆ ಮುನ್ನ ಚಿತ್ರತಂಡ “ಪೊಗರು” ಚಿತ್ರದ ಫಸ್ಟ್ ಲುಕ್ ಹೊರತರಲು ಯೋಜಿಸಿದೆ” ಧ್ರುವ ಹೇಳಿದ್ದಾರೆ.
ಶಾಲಾ ಹುಡುಗನಾಗಿ ಕಾಣಿಸಿಕೊಳ್ಳುವ ಉದ್ದೇಶದಿಂದ ದ್ರುವ 30 ಕಿಲೋ ತೂಕ ಕಳೆದುಕೊಂಡಿದ್ದಾರೆ.ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಕಳೆದುಕೊಂಡ ತುಕವನ್ನು ಮತ್ತೆ ಗಳಿಸಲು ಕೆಲ ಸಮಯ ಬೇಕಾಗುತ್ತದೆ ಎಂದು ನಟ ಹೇಳುತ್ತಾರೆ. “ಅಭಿಮಾನಿಗಳು ನಿರಾಸೆ ಪಡಬೇಕಾಗಿಲ್ಲ. ನಾನು ಕಾಲಾವಕಾಶ ತೆಗೆದುಕೊಂಡಿರುವುದು ನಿಜವಾದರೂ ಒಂದೊಂದು ಕ್ಷಣವನ್ನೂ ಸರಿಯಾದ ರಿತಿಯಲ್ಲೇ ಬಳಸಿಕೊಳ್ಳುವೆ”
ಏತನ್ಮಧ್ಯೆ ದ್ರುವ ಉದಯ್ ಮೆಹ್ತಾ ಜತೆಗಿನ ಯೋಜನೆಯೊಂಡರಲ್ಲಿ ಸಹ ಕಾಣಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.”ಆದರೆ ಸಧ್ಯ ನಾನು ಈ ಯೋಜನೆ ಬಗೆಗೆ ಏನನ್ನೂ ಹೇಳಲಾರೆ. ನಾನೀಗ “ಪೊಗರು” ಚಿತ್ರದ ಕುರಿತು ಹೆಚ್ಚು ಗಮನ ನೀಡುತ್ತಿದ್ದೇನೆ” ಅವರು ಹೇಳಿದ್ದಾರೆ.