ಮಹದಾಯಿ ಯೋಜನೆಗೆ ಅಗ್ರಹಿಸಿ ದಯಾಮರಣ ಚಳವಳಿ

ಹುಬ್ಬಳ್ಳಿ : ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿಗಾಗಿ ಒತ್ತಾಯಿಸಿ 4 ವರ್ಷದಿಂದ ಮಡೆಯುತ್ತಿರವ ಹೋರಾಟಕ್ಕೆ ಇದು ವರೆಗೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ದಯಾಮರಣಕ್ಕೆ ಆಗ್ರಹಿಸಿ ಇದೇ ಆ.11ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಚಳವಳಿ ಮಾಡಲು ತೀರ್ಮಾನಿಸಲಾಗಿದೆ ಎಂದು ರೈತ ಸೇನಾ ಕರ್ನಾಟಕದ ಕೇಂದ್ರ ಸಮನ್ವಯ ಸಮೀತಿ ಸದಸ್ಯ ಗುರು ರಾಯನಗೌಡರ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೆ ಆ.5 ರಂದು ನರಗುಂದದಲ್ಲಿ ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ನಾಲ್ಕು ಜಿಲ್ಲೆಯ ಒಂಬತ್ತು ತಾಲೂಕಿನ ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಮತ್ತು ಸಮಿತಿ ಮುಖಂಡರು ಸಭೆ ಸೇರಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಮಹದಾಯಿ ನ್ಯಾಯಾಧಿಕರಣದ ತೀರ್ಪು ನಮ್ಮ ರಾಜ್ಯದ ಪರ ಬಂದರೆ ಈ ಹೋರಾಟಕ್ಕೆ ಮೊದಲಿನಿಂದಲೂ ಅಭೂತಪೂರ್ವ ಬೆಂಬಲ ನೀಡಿದ ಬೆಂಗಳೂರಿನ ಸಂಘಟನೆಗಳ ಹಾಗೂ ನಾಗರಿಕರ ಜೊತೆ ವಿಜಯೋತ್ಸವ ಆಚರಿಸಿ ನಮ್ಮ ಊರುಗಳಿಗೆ ಮರಳುವುದು. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ರಾಷ್ಟ್ರಪತಿಗಳು ನಮಗೆ 253 ಜನರಿಗೆ ದಯಾಮರಣಕ್ಕೆ ಅನುಮತಿ ಕೊಡುವವರೆಗೆ ಬೆಂಗಳೂರಿನಲ್ಲಿ ಸುಮಾರು 1300 ಸಂಘಟನೆಗಳ ಬೆಂಬಲದೊಂದಿಗೆ ಹೋರಾಟ ಮುಂದುವರೆಸಲಾಗುವುದು ಎಂದು ರಾಯನಗೌಡರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಲ್ಲಣ್ಣ ಅಲೇಕಾರ, ಗಂಗಾಧರ ಧರೆಣ್ಣವರ, ಬಸವರಾಜ ಗುಡಿ, ಮಹೇಶ ನಾವಳ್ಳಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ