ಉಡುಪಿ:ಆ-9: ಪರಪ್ಪನ ಆಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಆಕ್ರಮಗಳನ್ನು ಬಯಲಿಗೆ ಎಳೆದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ರೂಪ ಡಿ ಹೋಮ್ ಗಾರ್ಡ್ ಐ ಜಿ ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಇಂದು ಉಡುಪಿಗೆ ಬೇಟಿ ನೀಡಿದ್ರು. ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಹೋಮ್ ಗಾರ್ಡ್ ಇಲಾಖೆಗೆ ಬೇಟಿ ನೀಡಿದ ಐ ಪಿ ಎಸ್ ರೂಪ ಡಿ ಅವರನ್ನು ಗೃಹ ರಕ್ಷಕ ದಳದ ಜಿಲ್ಲಾ ಅದೀಕ್ಷಕ ಡಾ ಪ್ರಶಾಂತ್ ಶೆಟ್ಟಿ ಹಾಗೂ ಹಿರಿಯ ಅಧಿಕಾರಿಗಳು ಆದರದಿಂದ ಬರ ಮಾಡಿಕೊಂಡ್ರು.
ಇದೇ ಸಂದರ್ಭ ಅವರು ಪರಪ್ಪನ ಆಗ್ರಹಾರ ಜೈಲಿನ ಅವವ್ಯಹಾರದ ಕುರಿತ ಸುದ್ದಿಗಾರರ ಪ್ರೆಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ್ರು
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ವಯ ಎಸಿಬಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆಯ ಕುರಿತು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದೇನೆ. ಇದುವರೆಗೂ ಲಭ್ಯವಾಗಿಲ್ಲ. ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದೇನೆ. ಮುಂದೆ ಏನಾಗಲಿದೆಯೋ ನೋಡೋಣ ಎಂದು ಡಿ.ರೂಪಾ ಹೇಳಿದರು.
ಅಂದಿನ ಬಂಧಿಖಾನೆ ಮಹಾನಿರ್ದೇಶಕ ಸತ್ಯನಾರಾಯಣ ರಾವ್ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕೈದಿಗಳಿಗೆ ರಾಜಾತೀಥ್ಯ ನೀಡಿರುವ ಪ್ರಕರಣದಲ್ಲಿ ಸತ್ಯನಾರಾಯಣ ರಾವ್ ಅವರು ಹಣ ಪಡೆದಿದ್ದಾರೆ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಜೈಲು ಅಧಿಕಾರಿಗಳ ಮಧ್ಯೆ ಹಣ ವರ್ಗಾವಣೆಯಾಗಿದೆ ಎಂದಷ್ಟೇ ಹೇಳಿದ್ದೇನೆ ಎಂದರು.