ಕರುಣಾನಿಧಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂಸತ್ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೆಟ್ರ ಕಳಗಂ (ಡಿಎಂಕೆ) ವರಿಷ್ಠ ಡಾ.ಎಂ.ಕರುಣಾನಿಧಿ ಅವರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಸಂಸತ್ತಿನ ಮುಂಗಾರು ಅಧಿವೇಶನದ ಲೋಕಸಭಾ ಕಲಾಪ ಇಂದು ಸಮಾವೇಶಗೊಳ್ಳುತ್ತಿದ್ದಂತೆ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಕರುಣಾನಿಧಿ ಅವರ ಗುಣಗಾನ ಮಾಡಿದರು. ಇವರು ದೂರದೃಷ್ಟಿಯ ಮತ್ತು ಸಮೂಹ ನಾಯಕ ಎಂದು ಸ್ಪೀಕರ್ ಬಣ್ಣಿಸಿದರು.

ನಂತರ ಅವರ ಗೌರವಾರ್ಥ ಮೌನ ಆಚರಿಸಿ ಸದನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಅವರು ಸಂತಾಪ ಸೂಚಕ ನಿರ್ಣಯ ಓದಿದರು. ಕರುಣಾನಿಧಿ ಅವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದ ಮುತ್ಸದ್ಧಿ ಎಂದು ಬಣ್ಣಿಸಿದರು.

ನಂತರ ಮೇಲ್ಮನೆಯಲ್ಲಿ ಸದಸ್ಯರು ಮೃತರ ಗೌರವಾರ್ಥ ಮೌನ ಆಚರಿಸಿದರು. ಬಳಿಕ ಸದನವನ್ನು ನಾಳೆಗೆ ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ