ಮೇಜರ್‌ ಸೇರಿ 4 ಯೋಧರು ಹುತಾತ್ಮ; ಗಡಿ ನುಸುಳುತ್ತಿದ್ದ 4 ಉಗ್ರರ ಎನ್ ಕೌಂಟರ್

ಬಂಡಿಪೋರಾ: ಗುರೇಜ್‌ ಸೆಕ್ಟರ್‌ನಲ್ಲಿ ಪಾಕಿಸ್ಥಾನ ಕಡೆಯಿಂದ ಗಡಿ ನುಸುಳುತ್ತಿದ್ದ ಉಗ್ರರ ತಂಡದ ಯತ್ನವನ್ನು ಗಡಿ ಭದ್ರತಾ ಪಡೆಗಳು ವಿಫ‌ಲಗೊಳಿಸಿದ್ದು, ಕಾರ್ಯಾಚರಣೆಯಲ್ಲಿ ಮೇಜರ್‌ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಮಂಗಳವಾರ ನಸುಕಿನ 1 ಗಂಟೆಯ ವೇಳೆಗೆ 8 ಮಂದಿ ಉಗ್ರರ ತಂಡ ಗಡಿ ನುಸುಳುತ್ತಿದ್ದ ವೇಳೆ ರಾಷ್ಟ್ರೀಯ ರೈಫ‌ಲ್ಸ್‌ನ ಯೋಧರು ಕಾರ್ಯಾಚರಣೆ ನಡೆಸಿದ್ದು ಭಾರೀ ಗುಂಡಿನ ಚಕಮಕಿ ನಡೆದಿದೆ. ಸ್ಥಳದಿಂದ ನಾಲ್ವರು ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಗಡಿ ನುಸುಳುತ್ತಿದ್ದ ಉಗ್ರರಿಗೆ ಭಾರೀ ಗುಂಡಿನ ದಾಳಿ ನಡೆಸಿ ಪಾಕ್‌ ಸೇನೆ ನೆರವು ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ