ಬೆಂಗಳೂರು, ಆ.7- ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೋಟಾರು ವಾಹನ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯದಿದ್ದರೆ ಒಂದು ವಾರದ ಕಾಲ ನಿರಂತರ ಪ್ರತಿಭಟಿಸುವುದಾಗಿ ಸಾರಿಗೆ ನೌಕರರ ಮುಖಂಡ ರೇವಪ್ಪ ತಿಳಿಸಿದರು.
ಫ್ರೀಡಂಪಾರ್ಕ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಪೆÇ್ರೀ ನೀಡುವುದರಿಂದ ಆಟೋ ಚಾಲಕರಿಗೆ ಮತ್ತು ಸಾರಿಗೆ ಕಾರ್ಯಕರ್ತರಿಗೆ ಸಮಸ್ಯೆಗಳು ಎದುರಾಗಿವೆ ಎಂದರು.
ಈ ಮಸೂದೆಯನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ. ಸಾರಿಗೆ ಸಂಸ್ಥೆಯನ್ನು ರಕ್ಷಿಸಬೇಕು. ವಿಪರೀತ ದಂಡ, ಶಿಕ್ಷೆಯನ್ನು ಕಡಿತಗೊಳಿಸಬೇಕು. ಸರಿಯಾದ ರಾಷ್ಟ್ರೀಯ ಸಾರಿಗೆ ನೀತಿಯನ್ನು ಜಾರಿಗೆ ತರಬೇಕು ಎಂದರು.
ಒಟಿಯು ಚಾಲಕರು ಮತ್ತು ಮಾಲೀಕರ ಅಧ್ಯಕ್ಷ ತನ್ವೀರ್ ಪಾಷ ಮಾತನಾಡಿ, ಮೋದಿ ಸರ್ಕಾರ ಚಾಲಕರಿಗೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರ ಖಾಸಗಿ ಕಂಪೆನಿಗಳಿಗೆ ಹೆಚ್ಚು ಪೆÇ್ರೀ ನೀಡುತ್ತಿದೆ. ಲಕ್ಷಾಂತರ ಕಾರ್ಯಕರ್ತರ ಸಮಸ್ಯೆ ಎದುರಾಗುತ್ತಿದೆ.
ಊಬರ್ ಮತ್ತು ಓಲಾ ಕ್ಯಾಬ್ಗಳ ಕಂಪೆನಿಗಳು ಆಟೋವನ್ನು ಆಕ್ರಮಿಸಿವೆ. ಈ ಮಸೂದೆ ಜಾರಿಗೆ ಬರುವುದರಿಂದ ಅನೇಕ ಕುಟುಂಬಗಳು ಬೀದಿ ಪಾಲಾಗಲಿವೆ ಎಂದರು.
ಅನೇಕ ಸಂಘಟನೆಗಳು, ಸಿಐಟಿಯುಸಿ, ಎಚ್ಎಂಎಸ್, ಎಐಟಿಯುಸಿ, ಎಆರ್ಟಿಯು ಸಂಘಟನೆಗಳು ಭಾಗವಹಿಸಿದ್ದವು.