ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಬಂಧಿತ ಆರೋಪಿ ಗಣೇಶ ಮಿಸ್ಕಿನ್ ಕುಟುಂಬಸ್ಥರ ವಿಚಾರಣೆ ವೇಳೆ ಗಣೇಶ ಮಿಸ್ಕಿನ್ ಅವರ ತಾಯಿ ಪುಷ್ಪಾ ಮಿಸ್ಕಿನ್ ಕುಸಿದು ಬಿದ್ದ ಘಟನೆ ನಡೆದಿದೆ. ಗಣೇಶನ ಅಣ್ಣ ರವಿ ಮಿಸ್ಕಿನ್ ವಶಕ್ಕೆ ಪಡೆಯಲು ಎಸ್.ಐ.ಟಿ ಅಧಿಕಾರಿಗಳು ಮುಂದಾದ ವೇಳೆ ಈ ಘಟನೆ ನಡೆದಿದೆ. ಈಗಾಗಲೇ ಗಣೇಶ ಮಿಸ್ಕಿನ್ ನನ್ನು ಎಸ್ ಐಟಿ ಅಧಿಅಕರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಆಘಾತದಿಂದಲೇ ಹೊರ ಬರದ ತಾಯಿ ಪುಷ್ಪಾ ಮಿಸ್ಕಿನ್, ಮತ್ತೊಬ್ಬ ಮಗನನ್ನು ಎಸ್.ಐ.ಟಿ ವಶಕ್ಕೆ ಪಡೆಯುವುದನ್ನ ಕಂಡು, ನಿಂತಜಾಗದಲ್ಲೆ ಕುಸಿದು ಬಿದ್ದಿದ್ದಾರೆ. ಅಸ್ವಸ್ಥಗೊಂಡ ಪುಷ್ಪಾ ಅವರನ್ನು ಕೂಡಲೇ ಕಿಮ್ಸ್ ಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಗಣೇಶ ಮಿಸ್ಕಿನ್ ಸಹೋದರ ರವಿ ಮಿಸ್ಕಿನ್ ಎಸ್.ಐ.ಟಿ. ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಗೌರಿಲಂಕೇಶ ಹತ್ಯೆ ಸಂಬಂಧಪಟ್ಟ ಎಸ್.ಐ.ಟಿ. ಅಧಿಕಾರಿಗಳ ವಿಚಾರಣೆ ತೀವ್ರಗೊಂಡಿದೆ.