
ನವದೆಹಲಿ: ಬಾಲಿವುಡ್ ನಟ ಅನಿಲ್ ಕಪೂರ್ ಮುಂದಿನ ಚಿತ್ರ ’ಫನ್ನಿ ಖಾನ್’ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಚಲನಚಿತ್ರದ ವಿತರಣೆ ಹಕ್ಕುಗಳಲ್ಲಿ ವಿಆವಾದ ಉಂತಾಗಿದ್ದ ಕಾರಣ ಚಿತ್ರ ನಿರ್ಮಾಪಕ ವಾಶು ಭಗ್ನಾನಿ ಚಿತ್ರ ಬಿಡುಗಡೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿರುವ ಕಾರಣ ನಿಗದಿಯಂತೆ ಚಿತ್ರವು ಇದೇ ಆಗಸ್ಟ್ 3ರಂದು ತೆರೆಗೆ ಬರಲಿದೆ.
ಚಿತ್ರದಲ್ಲಿ ನಟ ಅನಿಲ್ ಕಪೂರ್ ಆರ್ಕೆಸ್ಟ್ರಾ ಸಿಂಗರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ಗಾಯಕ ಮಹಮದ್ ರಫಿ ಹಾಗೂ ಶಮ್ಮಿ ಕಪೂರ್ ಅಪ್ಪಟ ಅಭಿಮಾನಿಯಾಗಿ ಕಾಣಿಸಿಕೊಳ್ಳುವ ಅನಿಲ್ ತಾವು ರಫಿ ಹಾಗೂ ಶಮ್ಮಿಯನ್ನು ದೇವರೆಂದು ಪೂಜಿಸುತ್ತಾರೆ ಮತ್ತು ಅವರ ಹಾಡುಗಳನ್ನು ಹಾಡುತ್ತಾರೆ.
ಸಂಗೀತ ಪ್ರಧಾನವಾದ ಈ ಚಿತ್ರದಲ್ಲಿ ಅನಿಲ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರು ಗಾಯಕರಾಗುವ ಮೂಲಕ ತನ್ನ ಮಗಳ ಕನಸನ್ನು ನೆರವೇರಿಸಲು ಬಯಸುವ ಭಾವನಾತ್ಮಕ ಪಾತ್ರದಲ್ಲಿ ನಟಿಸಿದ್ದಾರೆ.
ಅತುಲ್ ಮಂಜ್ರೇಕರ್ ಅವರ ಈ ಚಿತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಹಾಗು ರಾಜ್ ಕುಮಾರ್ ರಾವ್ ಸೇರಿ ಅನೇಕ ನಟರ ಅಭಿನಯವಿದೆ.