ಬೆಂಗಳೂರು, ಆ.5- ತಂಬಾಕು ನಿಯಂತ್ರಣ ಕಾನೂನು 2003 ಕಾಯ್ದೆ ಜಾರಿಗೆ ಪೆÇಲೀಸ್ ಅಧಿಕಾರಿಗಳ ಪಾತ್ರ ಮಹತ್ತರವಾದದ್ದು. ತಂಬಾಕು ಉತ್ಪನ್ನಗಳ, ಸರಬರಾಜು, ನಿಯಂತ್ರಣದ ಬಗ್ಗೆ ನಿಗಾವಹಿಸಿ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪೆÇಲೀಸರು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್ ತಿಳಿಸಿದರು .
ತಂಬಾಕು ನಿಯಂತ್ರಣ ಕಾನೂನು ಜಾಗೃತಿ ಹಾಗೂ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಭೆಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯ ಪ್ರಕಾರ ಸಾರ್ವಜನಿಕವಾಗಿ ಧೂಮಪಾನ ಮಾಡುವುದು ಅಪರಾಧವೆನಿಸುತ್ತದೆ. ಇವರಿಗೆ ನಿಯಮದಡಿ 200ರೂ ರವರೆಗೆ ದಂಡ ಸಹ ವಿಧಿಸಬಹುದು. ಅದರಂತೆ ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹಿರಾತು, ಪ್ರಯೋಜನಕತೆ ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಬಗ್ಗೆ ಭಿತ್ತಿಪತ್ರ, ಜಾಹಿರಾತು ಪ್ರಕಟಣೆ, ಪ್ರಸಾರ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಮೊದಲ ಸಲ 2 ವರ್ಷದ ಜೈಲು ಶಿಕ್ಷೆ ಅಥವಾ ರೂ 1000 ದಂಡ ಅಥವಾ ಈ ಎರಡೂ ವಿಧಿಸಬಹುದು. ಎರಡನೇ ಸಲ ತಪ್ಪಿತಸ್ಥರಾದರೆ 5000 ರೂ. ದಂಡ ಮತ್ತು 5 ವರ್ಷ ಶಿಕ್ಷೆ ಪ್ರಮಾಣವನ್ನು ವಿಧಿಸಬಹುದು. ಅಪ್ರಾಪ್ತ ವಯಸ್ಸಿನ ಮಕ್ಕಳ ತಂಬಾಕು ಸೇವನೆ ತಡೆಯಲು, ಶಿಕ್ಷಣ ಸಂಸ್ಥೆಗಳ ಹತ್ತಿರ ಇದನ್ನು ಮಾರಾಟ ಮಾಡದಂತೆ ನಿಘಾ ವಹಿಸಬೇಕಿದೆ ಎಂದು ಹೇಳಿದರು.
ಬೆಂಗಳೂರು ನಗರ ಜಿಲ್ಲಾಡಳಿತ, ಜಿಲ್ಲಾ ಪಂಚಯತï ಸಹಯೋಗದೊಂದಿಗೆ ಇದೇ 10 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ 1-19 ವಯಸ್ಸಿನ ಎಲ್ಲಾ ಮಕ್ಕಳಿಗೆ ಜಂತು ಹುಳು ನಾಶಕ ಮಾತ್ರೆಯನ್ನು ಎಲ್ಲಾ ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಆಗಸ್ಟï 10 ರಿಂದ ಉಚಿತವಾಗಿ ನೀಡಲಾಗುತ್ತದೆ. ಆ ದಿನದಂದು ಮಾತ್ರೆ ಪಡೆಯಲಾಗದ ಮಕ್ಕಳಿಗೆ ಆಗಸ್ಟ್ 17 ರಂದು ನೀಡಲಾಗುತ್ತದೆ. ಈ ಕುರಿತು ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಬಿಇಒಗಳಿಗೆ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರೂಪ ಸೂಚಿಸಿದರು.