ಹುಬ್ಬಳ್ಳಿ- ರೈಲು ವಿಳಂಬವಾದ ಹಿನ್ನೆಲೆ ನೂರಾರು ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗೆ ಗೈರಾಗಿದ್ದು, ನ್ಯಾಯಕ್ಕಾಗಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬೆಳಗಾವಿ, ಧಾರವಾಡ ಜಿಲ್ಲೆಗಳಿಂದ ಬೆಂಗಳೂರು, ಚಿಕ್ಕಮಂಗಳೂರು, ತುಮಕೂರು ಸೇರಿದಂತೆ ಬೇರೆ ಬೇರೆ ಕಡೆ ಸಾವಿರಾರು ಪರೀಕ್ಷಾರ್ಥಿಗಳ ತೆರಳುತ್ತಿದ್ದರು. ಆದರೆ, ಸೊಲಾಪುರದಿಂದ ಹುಬ್ಬಳ್ಳಿ ಮಾರ್ಗಾವಗಿ ಬೆಂಗಳೂರಿಗೆ ತೆರಳುವ ರಾಣಿಚೆನ್ನಮ್ಮ ಎಕ್ಸ್ ಪ್ರೆಸ್
ರೈಲು ವಿಳಂಬವಾದ ಹಿನ್ನೆಲೆ ಪರೀಕ್ಷಾರ್ಥಿಗಳ ಪರಿಕ್ಷೆಯಿಂದ ವಂಚಿತರಾಗಿದ್ದಾರೆ. ನಿನ್ನೆ ರಾತ್ರಿ 10:30 ಕ್ಕೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ತಲುಪಬೇಕಿದ್ದ ಚನ್ನಮ್ಮ ಎಕ್ಸಪ್ರೆಸ್, ಇಂದು ಬೆಳಿಗ್ಗೆ 6 ಗಂಟೆಗೆ ಬಂದು ತಲುಪಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ರೈಲ್ವೆ ಇಲಾಖೆ ಈ ಎಡವಟ್ಟಿಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಪರಿಕ್ಷಾ ದಿನಾಂಕ ಪ್ರಕಟಿಸುವಂತೆ ನಗರದ ಕೇಂದ್ರ ರೈಲು ನಿಲ್ದಾಣದ ಎದುರು ಪ್ರತಿಭಟನಾ ಧರಣಿ ಕೈಗೊಂಡಿದ್ದಾರೆ. ರೈಲ್ವೆ ಇಲಾಖೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಡೊಸೊದ್ದಾರೆ. ಧಾರವಾಡ ಕುಂಬಾರಗಣಿವಿ ಬಳಿ ಗೂಡ್ಸ್ ಟ್ರೈನ್ ಕೆಟ್ಟು ನಿಂತ ಹಿನ್ನೆಲೆ ರೈಲು ವಿಳಂಭವಾಗಿದೆ ಎನ್ನಲಾಗುತ್ತಿದ್ದು, ಪರೀಕ್ಷಾರ್ಥಿಗಳ ಪರೀಕ್ಷೆ ಬರೆಯುವ ಅವಕಾಶ ಕೈ ತಪ್ಪಿದದೆ. ಮೂರು ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು ರೈಲು ನಿಲ್ದಾಣದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ, ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಂಬಂಧ ಪಟ್ಟ ಇಲಾಖೆಯೊಂದಿಗೆ ಮಾತನಾಡುತ್ತೇನೆ. ವಂಚಿತ ಪರೀಕ್ಷಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಕಲ್ಪಿಸಿ ಶೀಘ್ರ ಪರಿಕ್ಷಾ ದಿನಾಂಕ ಘೋಷಣೆ ಮಾಡಿಸುವುದಾಗಿ ಭರವಸೆ ನೀಡಿದರು. ಇಷ್ಟಾದ್ರು, ಒಂದೇ ಪರೀಕ್ಷಾ ದಿನಾಂಕ ಘೋಷಣೆ ಮಾಡುವಂತೆ ಪರೀಕ್ಷಾರ್ಥಿಗಳು ಧರಣಿ ಮುಂದು ವರೆಸಿದ್ದಾರೆ.ಸಧ್ಯ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.