ಹೊಸದಿಲ್ಲಿ: ಕೇಂದ್ರದ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆಯ 29ನೇ ಸಲಹಾ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆ ಪರಿಹಾರಿಸಲು ಹಾಗೂ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಕ್ಯಾಶ್ಬ್ಯಾಕ್ ಸೌಲಭ್ಯ ಜಾರಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು.
ಭೀಮ್ ಆ್ಯಪ್ ಅಥವಾ ರೂಪೇ ಮೂಲಕ ಸರಕು ಮತ್ತು ಸೇವೆಗಳಿಗೆ ಗ್ರಾಹಕರು ಪೇಮೆಂಟ್ ಮಾಡಿದ್ರೆ ಶೇ.20 ರಷ್ಟು ಕ್ಯಾಶ್ಬ್ಯಾಕ್ ಪಡೆಯಬಹುದು. ಕ್ಯಾಶ್ಬ್ಯಾಕ್ಅನ್ನು ಗರಿಷ್ಠ 100ರೂ.ಗೆ ಮಿತಿಗೊಳಿಸಲಾಗಿದೆ. ಆರಂಭದಲ್ಲಿ ಆಸಕ್ತಿ ತೋರುವ ರಾಜ್ಯಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರುತ್ತೇವೆ ಎಂದು ಸಚಿವ ಗೋಯಲ್ ತಿಳಿಸಿದ್ದಾರೆ.
ನಗರದು ರಹಿತ ವಹಿವಾಟು ಹೆಚ್ಚಿಸಲು ಈ ಕ್ಯಾಶ್ಬ್ಯಾಕ್ ಸೌಲಭ್ಯ ನೀಡುತ್ತಿದ್ದೇವೆ. ಹಾಗೆಯೇ ಸಣ್ಣ, ಮಧ್ಯಮ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ತೀರ್ಮಾನಿಸಿದ್ದಾಗಿ ಸಚಿವರು ತಿಳಿಸಿದರು.
ಸಭೆಯಲ್ಲಿ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ದೆಹಲಿ ಡಿಸಿಎಂ ಮನಿಶ್ ಸಿಸೋಡಿಯಾ ಸೇರಿದಂತೆ ಹಲವರು ಹಾಜರಿದ್ದರು.