ಉತ್ತಮ ಶಿಕ್ಷಕನಾದವನು ತೋಟಗಾರನಿದ್ದಂತೆ: ಡಾ.ಮಲ್ಲಿಕಾರ್ಜುನಪ್ಪ

 

ಬೆಂಗಳೂರು, ಆ.5-ಉತ್ತಮ ಶಿಕ್ಷಕನಾದವನು ತೋಟಗಾರನಿದ್ದಂತೆ. ವಿದ್ಯಾರ್ಥಿಗಳ ಅವಗುಣಗಳನ್ನು ಕಳೆ ಕೀಳುವಂತೆ ತೆಗೆದು ಸ್ವಯಂ ಉದ್ಯೋಗದಂತಹ ಹೂ ಅರಳಿಸಲು ಪ್ರೇರಣೆ ನೀಡಬೇಕೆಂದು ಡಾ.ಮಲ್ಲಿಕಾರ್ಜುನಪ್ಪ ಹೇಳಿದರು.
ಎಸ್.ಜೆ.ಎಮ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗಶೀಲತಾಭಿವೃದ್ದಿ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸ್ವಯಂ ಉದ್ಯೋಗ ಮತ್ತು ಸೌಖ್ಯ ಜೀವನ ಸೌಲಭ್ಯ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವ ಉದ್ಯೋಗ ಅಕಾಂಕ್ಷಿಯುಳ್ಳ ಪ್ರತಿಯೊಬ್ಬರಿಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು, ಉದ್ಯೋಗ ಅವಕಾಶಗಳು, ಕೌಶಲ್ಯಾಭಿವೃದ್ದಿ ಮತ್ತು ಉದ್ಯೋಗದಲ್ಲಿನ ಸವಾಲುಗಳನ್ನು ಎದುರಿಸಲು ಮಾಹಿತಿ ನೀಡುವ ಕಾರ್ಯವನ್ನು ಉದ್ಯೋಗಶೀಲತಾಭಿವೃದ್ದಿ ವಿಭಾಗದಿಂದ ನೀಡಲಾಗುವುದು ಎಂದು ನುಡಿದರು.
ಬೆಂಗಳೂರಿನ ನ್ಯಾಕ್ ಸಲಹೆಗಾರರಾದ ಡಾ.ಸಿ.ಎಸ್.ವಿಷ್ಣುಕಾಂತ್ ಚಟಪಲ್ಲಿ ಮಾತನಾಡಿ, ಇಂದು ಸೇವಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ವಿಪುಲವಾಗಿವೆ. ಉದ್ಯೋಗಕ್ಕೆ ಪೂರಕವಾಗಿ ಕೌಶಲ್ಯ ವ್ಯಕ್ತಿಗಳ ಕೊರತೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ. ಕಂಪ್ಯೂಟರ್ ಜ್ಞಾನವಿಲ್ಲದವರನ್ನು ಇಂದು ಅನಕ್ಷರಸ್ಥನೆಂದು ಗುರುತಿಸಲಾಗುತ್ತಿದೆ. ಕಂಪ್ಯೂಟರ್ ಎನ್ನುವುದು ಸಾಧನೆಗೆ ಪೂರಕವಾದ ಉಪಕರಣ ಮಾತ್ರ, ಅದರಲ್ಲಿ ಕೌಶಲ್ಯ ಹೊಂದದ ಹೊರತು ಉದ್ಯೋಗ ಅವಕಾಶಗಳು ಲಭಿಸುವುದಿಲ್ಲ. ಬದಲಾದ ತಂತ್ರಜ್ಞಾನದ ಬಗ್ಗೆ ಜಾಗೃತಿ ಮತ್ತು ಕೌಶಲ್ಯವನ್ನು ವಿದ್ಯಾರ್ಥಿಗಳು ಸಂಪಾದಿಸಬೇಕು ಎಂದರು.
ಪ್ರಾಚಾರ್ಯ ಡಾ.ಬಿ.ಸಿ.ಶಾಂತಪ್ಪ ಮಾತನಾಡಿ, ಪದವಿ ನಂತರ ಉದ್ಯೋಗವನ್ನು ಹರಸಿ ಹೋಗುವ ಬದಲು ವಿದ್ಯಾರ್ಥಿಗಳು ಉದ್ಯೋಗದಾತರಾಗಲು ಪ್ರಯತ್ನಿಸಬೇಕು.
ಬೆಂಗಳೂರಿನ ನ್ಯಾಕ್‍ನ ಸಹಾಯಕ ಸಲಹೆಗಾರರಾದ ವಿಷ್ಣುಮಹೇಶ್, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಈ.ಚಿತ್ರಶೇಖರ್, ಎಸ್.ಜೆ.ಎಮ್.ಪಾಲಿಟೆಕ್ನಿಕ್‍ನ ಪ್ರಾಚಾರ್ಯರಾದ ಟಿ.ವಿ.ವಿರುಪಾಕ್ಷಪ್ಪ, ಎಸ್.ಜೆ.ಎಮ್.ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ಬೋರೇಶ್ ಪೆÇ್ರ.ವಿಜಯಲಕ್ಷ್ಮೀ ಹಿರೇಮಠ್, ಪೆÇ್ರ.ಚೇತನ್, ಪೆÇ್ರ.ಸುಶ್ಮಿತಾ ದೇಬ್, ಪೆÇ್ರ.ಪ್ರವೀಣ್.ಎಸ್. ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ