ಕರ್ನಾಟಕ ಸುರಕ್ಷತೆ ಕಾಯ್ದೆ ಜಾರಿ: 100 ಜನರು ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ

 

ಬೆಂಗಳೂರು, ಆ.5-ಸಾರ್ವಜನಿಕರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ನಾಟಕ ಸುರಕ್ಷತೆ (ಕ್ರಮಗಳು) ಕಾಯ್ದೆ ಜಾರಿಗೊಳಿಸಿದ್ದು, ಇದರನ್ವಯ ಬಸ್ ನಿಲ್ದಾಣ, ವಾಣಿಜ್ಯ ಸಂಸ್ಥೆ ಸೇರಿದಂತೆ 100 ಜನರು ಸೇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಕಡ್ಡಾಯಗೊಳಿಸಲಾಗಿದೆ ಎಂದು ಪೆÇಲೀಸ್ ಮಹಾನಿರ್ದೇಶಕರ ಕಚೇರಿಯ ಪ್ರಕಟಣೆ ತಿಳಿಸಿದೆ.
ನಾಗರಿಕರಿಗೆ ಹಾಗೂ ಸಂಘಟನೆಗಳಿಗೆ ಸುರಕ್ಷತೆ ಮತ್ತು ಭದ್ರತೆ ನೀಡುವುದು ಪೆÇಲೀಸ್ ಇಲಾಖೆಯ ಕರ್ತವ್ಯ. ಸುರಕ್ಷತಾ ವಾತಾವರಣದಿಂದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಆದ್ದರಿಂದ ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು 2017ರಲ್ಲಿ ಜಾರಿಗೊಳಿಸಲಾಗಿದೆ. ಈ ಸಂಬಂಧ 2018, ಜೂನ್28ರಂದು ಅಧಿಸೂಚನೆ ಹೊರಡಿಸಲಾಗಿದೆ.
ಈ ಕಾಯ್ದೆಯನ್ವಯ ವಾಣಿಜ್ಯ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಅಥವಾ 100 ಜನರು ಸೇರುವ ಸ್ಥಳ, ಒಂದು ದಿನದಲ್ಲಿ 500 ಜನರು ಸೇರುವಂತಹ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವುದು ಕಡ್ಡಾಯವಾಗಿದೆ.
ಸಾಮಾನ್ಯ ಸಾರ್ವಜನಿಕ ಜಾಗಗಳು, ಪಾರ್ಕಿಂಗ್ ಪ್ರದೇಶಗಳಲ್ಲಿ ಪ್ರವೇಶ ನಿಯಂತ್ರಣಗಳು, ಸಿಸಿಟಿವಿ ಕ್ಯಾಮರಾಗಳನ್ನು ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಸ್ಥಾಪಿಸಲು ಆದೇಶಿಸಲಾಗಿದೆ.
ದೈಹಿಕವಾಗಿ ಮತ್ತು ತಾಂತ್ರಿಕ ಯಂತ್ರೋಪಕರಣಗಳ ಮೂಲಕ ತಪಾಸಣೆ, ವೀಡಿಯೋ ತುಣುಕುಗಳನ್ನು 30 ದಿನಗಳ ಕಾಲ ಶೇಖರಿಸುವ ಸಾಮಥ್ರ್ಯವುಳ್ಳ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕಾಗುತ್ತದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಗೆ ತೆಗೆದುಕೊಂಡ ಕ್ರಮಗಳು ಹಾಗೂ ಅಳವಡಿಸಿಕೊಂಡಿರುವ ಯಂತ್ರೋಪಕರಣಗಳ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ತಮ್ಮ ವ್ಯಾಪ್ತಿಯ ಪೆÇಲೀಸ್ ಇನ್ಸ್‍ಪೆಕ್ಟರ್ ಅವರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಅನುಕ್ರಮವಾಗಿ ಫಾರಂ 15ರಲ್ಲಿ ಸಲ್ಲಿಸಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಒಂದು ತಿಂಗಳ ತಪ್ಪಿಗೆ 5000 ರೂ., 2 ತಿಂಗಳ ತಪ್ಪಿಗೆ 10 ಸಾವಿರ ಹಾಗೂ ಕಾಯ್ದೆ ಮತ್ತು ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸಿದರೆ ಸಂಸ್ಥೆಗೆ ಬೀಗ ಹಾಕಲಾಗುವುದು ಅಥವಾ ಸಂಸ್ಥೆಯನ್ನು ಮುಚ್ಚಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ