ಬೆಂಗಳೂರು, ಆ.4-ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಶೋಷಣೆ ತಡೆಯಲು ಜಾರಿಗೆ ತಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2012ರ ಬಗ್ಗೆ ಇಂದು ಪೆÇಲೀಸ್ ತನಿಖಾಧಿಕಾರಿಗಳಿಗೆ ಪೆÇಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಪೆÇೀಕ್ಸೊ ಕಾಯ್ದೆ-2017ರ ಜಾರಿಯ ಬಲವರ್ಧನೆ ಮತ್ತು ಪಾಲುದಾರರ ನಡುವೆ ಸಮನ್ವಯತೆ ಹೆಚ್ಚಳ ಎಂಬ ಈ ಕಾರ್ಯಾಗಾರವನ್ನು ರಾಜ್ಯ ಪೆÇಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್.ರಾಜು ಉದ್ಘಾಟಿಸಿದರು.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಶೀಘ್ರ ಹಾಗೂ ನ್ಯಾಯಯುತ ತನಿಖೆ, ನ್ಯಾಯಾಲಯದಲ್ಲಿ ವಿಚಾರಣೆ, ವಿಶೇಷ ಮಕ್ಕಳ ಪೆÇಲೀಸ್ ಘಟಕಗಳ ಮಕ್ಕಳ ಪೆÇಲೀಸ್ ಕಲ್ಯಾಣ ಅಧಿಕಾರಿಗಳ ಪಾತ್ರ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕರಾದ ಡಾ.ಮಾಲಿನಿ ಕೃಷ್ಣಮೂರ್ತಿ ಹಾಗೂ ಸ್ವತಂತ್ರ ಕಾನೂನು ಅಧ್ಯಯನಕಾರರಾದ ಸ್ವಗತಾರಹಾ ಅವರು ಕಾರ್ಯಾಗಾರದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ನಿರ್ವಹಣೆ, ತನಿಖಾಧಿಕಾರಿಗಳು ತನಿಖೆಯ ವೇಳೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಯಲ್ಲಿ ದೂರು ದಾಖಲಿಸುವ ಹಂತದಿಂದ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಪಾಲಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.