
ಬೆಂಗಳೂರು, ಆ.4- ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಶೋಷಣೆಯು ಅತ್ಯಂತ ಗಂಭೀರವಾದ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ತನಿಖೆಯಲ್ಲಿ ಶೋಷಣೆಗೊಳಗಾದ ಮಕ್ಕಳ ಸಾಮಾಜಿಕ ಘನತೆ ಹಾಗೂ ಕ್ಷೇಮ ಕಾಪಾಡುವ ಜವಾಬ್ದಾರಿಯನ್ನು ಪೆÇಲೀಸರು ನಿರ್ವಹಿಸಬೇಕು ಎಂದು ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರು ಪೆÇಲೀಸರಿಗೆ ಕರೆ ನೀಡಿದರು.
ನಗರದ ಪೆÇಲೀಸ್ ಮಹಾ ನಿರೀಕ್ಷಕರ ಕಚೇರಿಯಲ್ಲಿ ಫೆÇೀಕ್ಸೊ ಕಾಯ್ದೆ-2012ರ ಸಮರ್ಪಕ ಅನುಷ್ಠಾನ ಕುರಿತಂತೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದ ಅವರು, ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಶೋಷಣೆಯ ಘಟನೆಗಳಿಗೆ ಸಂಬಂಧಿಸಿದಂತೆ ಕಾಲಮಿತಿಯಲ್ಲಿ ನ್ಯಾಯಯುತವಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ತನಿಖೆ ನಡೆಯುವಾಗ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಗಳ ಅರಿವು ತನಿಖಾಧಿಕಾರಿಗಳಿಗೆ ಇರಬೇಕು. ಇಂತಹ ಪ್ರಕರಣಗಳ ತನಿಖೆ ಪೂರ್ಣಗೊಳ್ಳುವ ತನಕ ಹಾಗೂ ಪೂರ್ಣಗೊಂಡ ನಂತರ ಸಹ ಶೋಷಣೆಗೆ ಒಳಪಟ್ಟ ಮಕ್ಕಳ ಬಗ್ಗೆ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡು ಮಕ್ಕಳ ಘನತೆಯನ್ನು ಕಾಪಾಡುವುದು ಪೆÇಲೀಸ್ ಇಲಾಖೆಯ ಕರ್ತವ್ಯವಾಗಿದೆ ಎಂದು ಹೇಳಿದರು.
ಇಂತಹ ಘಟನೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿದ್ದಲ್ಲಿ ಉತ್ತಮ ರೀತಿಯ ತನಿಖೆಗೆ ಸಹಕಾರಿಯಾಗಲಿದೆ. ಗುಣಮಟ್ಟದ ತನಿಖೆ ನಡೆಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಹಿರಿಯ ಪೆÇಲೀಸ್ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ, ವಕೀಲರಾದ ಸುಜಾ ಸುಕುಮಾರನ್, ವಾಣಿ ವಿಲಾಸ ಆಸ್ಪತ್ರೆ ವೈದ್ಯೆ ಡಾ.ಸವಿತಾ, ವಿಧಿ-ವಿe್ಞÁನ ಪ್ರಯೋಗಾಲಯದ ಡಾ. ವಿನೋದ್ ಲಕ್ಕಪ್ಪನ್, ಹಿರೇಮಣಿ ಉಪಸ್ಥಿತರಿದ್ದರು.