ಬರ್ಮಿಂಗ್ಯಾಮ್: ಮೊನ್ನೆ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಅವರ ಮೈಕ್ ಡ್ರಾಪ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ನಾಯಕರುಗಾಳದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಪ್ರಕರಣವನ್ನ ಮರೆತಿದ್ದರೂ ಪಂದ್ಯದ ರೆಫರಿಗಳು ಮಾತ್ರ ಪ್ರಕರಣವನ್ನ ಮರೆತಂತೆ ಕಾಣುತ್ತಿಲ್ಲ.
ಪಂದ್ಯದ ಮೂರನೇ ದಿನಕ್ಕೂ ಮುನ್ನ ರೆಫರಿ ಜೆಫ್ ಕ್ರೋವ್ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಕೆಲ ಹೊತ್ತು ಮಾತನಾಡಿದ್ರು. ಇದು ಸಾಕಷ್ಟು ಕೂತೂಹಲ ಕೆರೆಳಿಸಿದೆ. ಇದು ಸಾಕಷ್ಟು ಕೂತೂಹಲ ಕೆರೆಳಿಸಿದ್ದು ಮೈಕ್ ಡ್ರಾಪ್ ಪ್ರಕರಣದ ಬಗ್ಗೆಯೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಹ್ಲಿ ವಿರುದ್ಧ ಕ್ರಮವಿಲ್ಲ
ವಿವಾದಿತ ಮೈಕ್ ಡ್ರಾಪ್ ಪ್ರಕರಣ ಸಂಬಂಧ ಅಂಪೈರ್ಗಳು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದರೆ ಪ್ರಕರಣ ಸಂಬಂಧ ಇಂಗ್ಲೆಂಡ್ ತಂಡ ನಾಯಕ ವಿರಾಟ್ ಕೊಹ್ಲಿ ಬಳಿ ಮಾತನಾಡುವಂತೆ ರೆಫರಿಗೆ ಮನವಿ ಸಲ್ಲಿಸಿರಬಹುದೆಂದು ತಿಳಿದು ಬಂದಿದೆ.