ಸುಪ್ರೀಂ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ನೇಮಕ

ನವದೆಹಲಿ:ಆ-4: ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಕೊರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.

ಈ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರಕ್ಕೇರಿದೆ. ಆರ್‌. ಭಾನುಮತಿ ಹಾಗೂ ಇಂದು ಮಲ್ಹೋತ್ರಾ ಅವರು ಈಗಾಗಲೇ ಕರ್ತವ್ಯದಲ್ಲಿದ್ದು, ಈಗ ಇಂದಿರಾ ಬ್ಯಾನರ್ಜಿ ಸೇರ್ಪಡೆಯಾಗಿದ್ದಾರೆ.

ಫಾತಿಮಾ ಬೀವಿ, ಸುಜಾತಾ ವಿ. ಮನೋಹರ್‌, ರುಮಾ ಪಾಲ್‌, ಗ್ಯಾನ್‌ ಸುಧಾ ಮಿಶ್ರಾ, ರಂಜಾನಾ ಪ್ರಕಾಶ್‌ ದೇಸಾಯಿ, ಬಾನುಮತಿ ಮತ್ತು ಮಲ್ಹೋತ್ರಾ ಅವರ ನಂತರ ‘ಸುಪ್ರೀಂ’ಗೆ ನೇಮಕವಾದ ಎಂಟನೇ ಮಹಿಳಾ ನ್ಯಾಯಮೂರ್ತಿ ಎನಿಸಿದ್ದಾರೆ.

ಇಂದಿರಾ ಬ್ಯಾನರ್ಜಿ(60) ಅವರು, ಸೆಪ್ಟೆಂಬರ್‌ 24, 1957ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ್ದರು. ಲೊರೆಟೋ ಹೌಸ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು ಕಲ್ಕತ್ತಾ ವಿಶ್ವ ವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಕಲ್ಕತ್ತಾ ಹೈಕೋರ್ಟ್‌ನಲ್ಲಿ 1985ರಲ್ಲಿ ವಕೀಲೆಯಾಗಿ ಅಭ್ಯಾಸ ಆರಂಭಿಸಿದ ಇವರು, ಏಪ್ರಿಲ್‌ 05, 2017 ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.

ಬ್ಯಾನರ್ಜಿ ಹೆಸರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಜುಲೈ 16ರಂದು ಕೊಲಿಜಿಯಂ ಶಿಫಾರಸು ಮಾಡಿತ್ತು. 15 ದಿನಗಳ ನಂತರ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದೆ.

Justice Indira Banerjee’s Appointment To Supreme Court, A New Record

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ