ಮಥುರಾ: ತ್ರಿವಳಿ ತಲಾಖ್ ಎದುರಿಸುತ್ತಿರುವ ಮಹಿಳೆಯರು ಹಿಂದೂ ಧರ್ಮಕ್ಕೆ ಸೇರಿಕೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ತಿಳಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿರುವ ಸಾಧ್ವಿ ಪ್ರಾಚಿ, ತಲಾಖ್ನಿಂದ ಮಹಿಳೆಯರು ಖಂಡಿತವಾಗಿಯೂ ವಿಚ್ಛೇದನ ಪಡೆಯಬೇಕಾಗುತ್ತದೆ. ಹಲಾಲಾ ಪದ್ಧತಿ ಕೂಡ ವಿವಾದಿತ ಮದುವೆ ವಿಧ. ಜೀವನ ಹಾಳು ಮಾಡುವಂತಹ ಇಂತಹ ಸಂಸ್ಕೃತಿ ಬೇಡ, ಹಿಂದೂತ್ವವನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಹಿಂದೂ ಧರ್ಮ ಒಂದು ಜೋಡಿಯನ್ನು ಏಳು ಬಾರಿ ಬಂಧನಕ್ಕೊಳಪಡಿಸುತ್ತದೆ. ಹಿಂದೂ ಸಮುದಾಯದಲ್ಲಿ ಉತ್ತಮ ಮೌಲ್ಯ ಪಡೆಯಬಹುದು. ಹಿಂದೂ ಧರ್ಮಕ್ಕೆ ಬರುವವರನ್ನು ಸ್ವಾಗತಿಸುವೆ ಎಂದಿದ್ದಾರೆ.