ಬೆಂಗಳೂರು, ಆ.3-ಎಂಬಿಬಿಎಸ್ ಕೋರ್ಸ್ ಮಾಡಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಉತ್ತರ ಅಮೆರಿಕಾದ ಬಾರ್ಬಡೋಸ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವಿಫುಲ ಅವಕಾಶ ದೊರಕಿಸಿ ಕೊಡುವುದಾಗಿ ಉತ್ತರ ಅಮೆರಿಕಾದ ಮಾಜಿ ಮಂತ್ರಿ, ಬ್ರಿಡ್ಜ್ಟೌನ್ ಇಂಟರ್ನಲ್ ವಿಶ್ವವಿದ್ಯಾಲಯದ ಉಪಕುಲಪತಿ ರೊನಾಲ್ಡ್ ಜೋನ್ಸ್ ಕರೆ ಕೊಟ್ಟಿದ್ದಾರೆ.
ಬೆಂಗಳೂರು ನಗರದ ಮಾರತ್ಹಳ್ಳಿ ಕಲಾಮಂದಿರದಲ್ಲಿ ಗುರುವಾರ ಬಾರ್ಬಡೋಸ್ ವಿವಿಗೆ ದಾಖಲಾಗಿರುವ ಭಾರತೀಯ ವೈದ್ಯಕೀಯ ಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಣ ಮಾಡಬಯಸುವ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚದಿರಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ವಿವಿಧ ದೇಶಗಳ ವಿದ್ಯಾರ್ಥಿಗಳು ಇಲ್ಲಿ ಬಂದು ಕಲಿಯುವ ಭಾರತದ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿಕೊಡಲಾಗಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಭಾರತದ ಎಂಬಿಬಿಎಸ್ ಶಿಕ್ಷಣಾರ್ಥಿಗಳಿಗೆ ವಿಶ್ವವಿದ್ಯಾಲಯ ಉತ್ತಮವಾದ ವ್ಯವಸ್ಥೆ ಕಲ್ಪಿಸುವುದರೊಂದಿಗೆಉತ್ತಮ ಶಿಕ್ಷಣ ನೀಡಲು ಸಿದ್ಧವಿದೆ. ಉತ್ತಮ ಕಲಿಕಾ ವಾತಾವರಣ ಸಹ ನೀಡಲಾಗುವುದು. ದಕ್ಷಿಣ ಭಾರತೀಯ ಆಹಾರ, ಉತ್ತಮವಾದ ಕಲಿಕೆಗೆ ಪೂರಕವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುವುದು ಎಂದರು.
5 ವರ್ಷಗಳ ಕೋರ್ಸ್ ಇದಾಗಿರುತ್ತದೆ. ಯುಎಸ್ಎಂಎಲ್ ನಲ್ಲಿ ಕ್ಲಿನಿಕಲ್ ರೋಟೇಷನ್ ಕೋರ್ಸ್ 2 ವರ್ಷಗಳಾಗಿರುತ್ತದೆ. ಅಬ್ರಾಡ್ನಲ್ಲಿಯೇ ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ನಡೆಸುವ ನೀಟ್ ಪರೀಕ್ಷೆ ಕೊಡಿಸಲಾಗುವುದು. ಈ ವಿಶ್ವವಿದ್ಯಾಲಯದಿಂದ ಅಮೆರಿಕಾ, ಜಾರ್ಜಿಯಾ, ಚೈನಾದಲ್ಲಿ ಎಂಬಿಬಿಎಸ್ ಶಿಕ್ಷಣ ನೀಡಲಾಗುತ್ತದೆ ಎಂದರು.
ಮೆಡಿಕಾನ್ನ ಡಾ. ಲಕ್ಷ್ಮಿಕಾಂತ ರೆಡ್ಡಿ, ದಕ್ಷಿಣ ಭಾರತೀಯ ಅಡಿಚಿ?ಂï್ಸ ಡೈರೆಕ್ಟರ್ ಸಾಯಿ ಮುಂತಾದವರು ಪಾಲ್ಗೊಂಡಿದ್ದರು.