
ನವದೆಹಲಿ: ಸರಕುಗಳ ದರ ಏರಿಕೆ ಹಾಗೂ ವಿದೇಶಾಂಗ ವಿನಿಮಯದಲ್ಲಿನ ಏರು-ಪೇರು, ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.
ಬೆಲೆ ಏರಿಕೆ ಪ್ರಮಾಣದ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ, ವಿವಿಧ ಮಾದರಿಗಳಿಗೆ ವಿವಿಧ ಹಂತದಲ್ಲಿ ಬೆಲೆ ಏರಿಕೆ ಮಾಡಲಾಗುತ್ತದೆ. ಎಂದು ಮಾರುತಿ ಸುಜೂಕಿ ಇಂಡಿಯಾದ ಹಿರಿಯ ವ್ಯವಸ್ಥಾಪಕ ಆರ್ ಎಸ್ ಕಲ್ಸಿ ಹೇಳಿದ್ದಾರೆ. ವಿದೇಶಾಂಗ ವಿನಿಮಯದಲ್ಲಿ ಉಂಟಾಗಿರುವ ಏರು-ಪೇರು ಸಹ ಸಂಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸರಕುಗಳ ಬೆಲೆ ಏರಿಕೆ, ತೈಲ ಬೆಲೆ ಏರಿಕೆಗಳ ಹೊರೆಯನ್ನು ಸಂಸ್ಥೆ ಹೆಚ್ಚುಕಾಲ ತಡೆಯುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಕಾರುಗಳ ಬೆಲೆಯನ್ನೂ ಏರಿಕೆ ಮಾಡುತ್ತಿರುವುದಾಗಿ ಮಾರುತಿ ಸುಜೂಕಿ ಹೇಳಿದೆ.