ಆ.8ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಿಂಹ ಘರ್ಜನೆ ಚಲೋ

Varta Mitra News

 

ಬೆಂಗಳೂರು,ಆ.3-ಪರಿಶಿಷ್ಟ ಜಾತಿ/ ಪಂಗಡ ಅಟ್ರಾಸಿಟಿ ಕಾನೂನುಬದ್ದವಾಗಿ ಕಾಯ್ದೆಯನ್ನು ಸಂಪೂರ್ಣವಾಗಿ ಯಥಾಸ್ಥಿತಿಯಾಗಿ ಮುಂದುವರೆಸುವಂತೆ ಒತ್ತಾಯಿಸಿ ಮಾದಿಗ ದಂಡೋರ ಸಮಿತಿ ದಲಿತ ಗಿರಿಜನ ಸಿಂಹ ಘರ್ಜನೆ ಚಲೋವನ್ನು ಇದೇ 8ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಬಿ.ನರಸಪ್ಪ ದಂಡೋರ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 70 ವರ್ಷಗಳಿಂದಲೂ ದೀನ ದಲಿತರು, ಗಿರಿಜನ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ದೇಶದಾದ್ಯಂತ ಗಿರಿಜನ, ಮಹಿಳಾ ಮತ್ತು ಮಕ್ಕಳ ಮೇಲೆ ಹಲ್ಲೆ ಅತ್ಯಾಚಾರಗಳು ನಡೆಯುತ್ತಲೇ ಇದೇ ಎಂದು ತಿಳಿಸಿದರು.
ಇಂತಹ ಘಟನೆಗಳು ನಡೆದಾಗ, ನಾವು ಕಾನೂನಿಂದ ರಕ್ಷಣೆ ಪಡೆಯಲು ಇದ್ದ ಅವಕಾಶಗಳನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಆದರ್ಶ್ ಕುಮಾರ್ ಜೋಯೆಲ್ ಮತ್ತು ಯುಯು ಲಲಿತಾ ಇವರು 2018 ಮಾರ್ಚ್ 20ರ ತೀರ್ಪಿನಲ್ಲಿ ನೀವೀರ್ಯಗೊಳಿಸಿರುವುದು ತಮ್ಮಗೆಲ್ಲ ತಿಳಿದ ಸಂಗತಿ.
ಈ ಆದೇಶವನ್ನು ಮರುಪರಿಶೀಲಿಸಲು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದು ದಲಿತ ಪ್ರತಿಭಟನಾಕಾರರು ಪೆÇಲೀಸರ ಗುಂಡೇಟಿಗೆ ಬಲಿಯಾದರು ಎಂದು ತಿಳಿಸಿದರು.
ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಪರಿಷ್ಕರಣೆಗೊಳಿಸದೆ ಯಥಾವತ್ತಾಗಿ ನಿರ್ವಹಿಸಲು ಒತ್ತಾಯಿಸಿ ದೇಶಾದ್ಯಂತ ಲಕ್ಷಾಂತರ ಮಂದಿ ಇದೇ 8ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಸೇರಿ ಉಗ್ರ ಪ್ರತಿಭಟನೆ ಮೂಲಕ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ