ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಅವರ ಮೇಲೆ ನಡೆದಿರುವ ಹಲ್ಲೆ ದುರಾದೃಷ್ಟಕರ, ಸಧ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಂತರವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ರು. ಹುಬ್ಬಳ್ಳಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮುಖಂಡ ಆನಂದ ಚೋಪ್ರಾ ಅವರನ್ನ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾಧ್ಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆನಂದ ಚೋಪ್ರಾ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿಯೂ ಆಪ್ತರು. ಕಾಂಗ್ರೆಸ್ ನಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ನನಗೆ ಸ್ವಂತ ಅಣ್ಣನ ರೀತಿ ಬರನ್ಯನಿಗೆ ನಿಂತು ಪ್ರೋತ್ಸಾಹಿಸಿದ್ದಾರೆ. ಆನಂದ ಚೋಪ್ರಾ ಅವರ ಕೊಲೆ ಯತ್ನ ನಡೆದಿರೋದು ದುರದೃಷ್ಟಕರ ಎಂದರು. ಈಗಾಗಲೇ ಆರೋಪಿಗಳು ಸಿಕ್ಕಿದ್ದು, ಯಾವ ಕಾರಣಕ್ಕೆ ಕೊಲೆಗೆ ಯತ್ನ ನಡೆದಿದೆ ಅನ್ನೋದು ತನಿಖೆಯಿಂದ ತಿಳಿಯಲಿದೆ. ಆದಷ್ಟುಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸ್ತೇನೆ. ಧೈರ್ಯವನ್ನೂ ಹೇಳಿದ್ದೇನೆ ಎಂದರು. ಆನಂದ ಚೋಪ್ರಾ ಅವರು ಅಜಾತಶತ್ರುವಿದ್ದಂತೆ. ಚುನಾವಣೆ ವೇಳೆ ೨ ತಿಂಗಳು ನನ್ನ ಗೆಲುವಿಗಾಗಿ ಶ್ರಮಿಸಿದ್ರು. ರಾಜಕಾರಣದಲ್ಲಿ ಇಂಥವರು ಕಡಿಮೆ ಜನ ಸಿಗ್ತಾರೆ ಎಂದರು. ಇನ್ನು ಪ್ರತ್ಯೇಕ ಉತ್ತರಕರ್ನಾಟಕ ಬಗ್ಗೆ ಹೇಳಿದ ಅವರು, ಪ್ರತ್ಯೇಕ ಅನ್ನೋದು ತಪ್ಪು. ಉತ್ತರಕರ್ನಾಟಕ ಇನ್ನೂ ಅಭಿವೃದ್ಧಿ ಆಗಬೇಕು ಅನ್ನೋದರ ಪರ ನಾನಿರುವೆ. ಉತ್ತರಕರ್ನಾಟಕಕ್ಕೆ ಏನೇನ್ ಕೊಡುಗೆ ನೀಡಿಲಾಗಿದೆ ಅನ್ನೋದರ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದರು. ಪ್ರತ್ಯೇಕ ರಾಜ್ಯದ ಬೇಡಿಕೆಗೆ ಕುಮಾರಸ್ವಾಮಿಯವರು ಕುಮ್ಮಕ್ಕು ಕೊಡ್ತಾರೆ ಅಂತ ನನಗೆ ಅನಿಸೋದಿಲ್ಲ. ಆ ರೀತಿ ಕುಮಾರಸ್ವಾಮಿ ಮಾತಾಡಿದಾರೆ ಅನ್ನೋದನ್ನ ನಾನೇನೂ ಕೇಳಿಲ್ಲ. ಕರ್ನಾಟಕ ಏಕೀಕರಣದಲ್ಲಿ ಏನೇನಾಗಿತ್ತೋ ಅದನ್ನ ನೋಡ್ಬೇಕು. ಅದನ್ನ ಮೆಲುಕು ಹಾಕೋಣ. ಅಖಂಡ ಕರ್ನಾಟಕದ ಕನಸು ನಮ್ಮದು. ಇದನ್ನೇ ಇರಿಸಿಕೊಂಡ ಅಭಿವೃದ್ಧಿ ಮಾಡೋಣ ಎಂದರು.