ಹುಬ್ಬಳ್ಳಿ – ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನೂ ಅಭಿವೃದ್ಧಿಯಾಗಬೇಕಿದೆ ಎಂದು ಸಚಿವ ಆರ್.ವಿ ದೇಶಪಾಂಡೆ ಹೇಳಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಯಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದರು. ಧಾರವಾಡ ಜಿಲ್ಲೆಗೆ ನನಗೆ ಮೊದಲಿಂದಲೂ ಸಂಪರ್ಕ ಇದೆ. ನಾನು ಯಾವತ್ತೂ ಧಾರವಾಡಕ್ಕೆ ಬರುತ್ತಿರುತ್ತೇನೆ. ಧಾರವಾಡ ಒಳ್ಳೆಯ ಜಿಲ್ಲೆ, ಇಲ್ಲಿ ಸಾಕಷ್ಟು ಪ್ರಗತಿಪರ ವಿಚಾರವಾದಿಗಳಿದ್ದಾರೆ. ಜಿಲ್ಲೆ ಸಾಕಷ್ಟು ಅಭಿವೃದ್ಧಿಯಾಗಿದೆ, ಇನ್ನೂ ಅಭಿವೃದ್ಧಿ ಯಾಗಬೇಕಿದೆ. ಅಭಿವೃದ್ಧಿ ಕೆಲಸ ಮಾಡಬೇಕಾದ್ರೆ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಅವಳಿ ನಗರದ ಪಾಲಿಕೆ ಬರುವ 115 ಕೋಟಿ ಬಾಕಿ ಇದೆ, ಇದು ನನ್ನ ಗಮನಕ್ಕೆ ಬಂದಿಲ್ಲಾ. ಕುಡಿಯುವ ನೀರಿಗಾಗಿ 24 ಕೋಟಿ ಹಣ ಬಿಡುಗಡೆ ಮಾಡಬೇಕು, ಅದನ್ನ ತಕ್ಷಣ ಬಿಡುಗಡೆ ಮಾಡಿಸುತ್ತೇನೆ. ಪ್ರತ್ಯೇಕ ರಾಜ್ಯದ ಬಗ್ಗೆ ಬಿಜೆಪಿಯವರು ಏನೂ ಹೇಳುತ್ತಾರೆ, ಅವರಿಗೆ ಗೊತ್ತಿಲ್ಲ. ಪ್ರತ್ಯೇಕ ರಾಜ್ಯವನ್ನ ಯಾರು ಕೇಳುತ್ತಾರೆ…? ಇದು ಅಖಂಡ ಕರ್ನಾಟಕವಲ್ಲ, ಪ್ರಗತಿಪರ ಕರ್ನಾಟಕ. ಕಾಂಗ್ರೆಸ್ ಪಕ್ಷದಿಂದಲೇ ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಜಾರಿಯಾಗಿದೆ. ಬಿಜೆಪಿಯವರು ಸಹಕಾರ ಬೇಕು, ಎಲ್ಲರ ಸಹಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.