ಹುಬ್ಬಳ್ಳಿ/ಧಾರವಾಡ/ಗದಗ: ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ ಕರೆ ನೀಡಲಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿ, ಧಾರವಾಡ ಮತ್ತು ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗದಗ ಜಿಲ್ಲೆಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಜೀವನ ಎಂದಿನಂತೆ ಇತ್ತು.
ಬಂದ್ ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ. ಹೀಗಾಗಿ ಬೆಳಗ್ಗೆಯಿಂದಲೂ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿಲ್ಲ. ಅಂಗಡಿಮುಂಗಟ್ಟುಗಳನ್ನು ತೆರೆಯಲಾಗಿದ್ದು, ವ್ಯಾಪಾರ ವಹಿವಾಟು ಸರಾಗವಾಗಿ ನಡೆದಿದೆ. ಬಂದ್ ಗೆ ಯಾವುದೇ ಕನ್ನಡಪರ ಸಂಘಟನೆಗಳಿಂದ ಬೆಂಬಲ ಸಿಕ್ಕಿಲ್ಲ. ಕೇವಲ ಉತ್ತರ ಕರ್ನಾಟಕ ರೈತ ಸಂಘದಿಂದ ಮಾತ್ರ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ವಾಣಿಜ್ಯ ನಗರಿಯಲ್ಲಿ ಬಂದ್ ಛಾಯೆ ಕಾಣಿಸಿಗಲಿಲ್ಲ. ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಉತ್ತರ ಕರ್ನಾಟಕ ರೈತ ಸಂಘ ಹೇಳಿದೆ. ಸಿ.ಎಂ ಕುಮಾರಸ್ವಾಮಿ ಅವರು 15 ದಿನಗಳ ಗಡುವು ನೀಡುದ್ದೇವೆ. ಸಮಯ ತೆಗೆದುಕೊಂಡಿದ್ದಾರೆ. ಹೀಗಾಗಿ ಈ ಭಾಗದ ಬೇಡಿಕೆಗಳನ್ನು ಹದಿನೈದು ದಿನದಲ್ಲಿ ಈಡೇರಿಸದೇ ಇದ್ದರೆ, ಉಗ್ರ ಹೋರಟ ಮಾಡುವುದಾಗಿ ಸಂಘಟನೆ ಪ್ರಮುಖರು ತಿಳಿಸಿದ್ದಾರೆ. ಇಂದು ನಗರದ ಚೆನ್ನಮ್ಮ ವೃತ್ತದಿಂದ ತಹಶೀಲ್ದಾರ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ವಿರುಪಾಕ್ಷ ಕಳ್ಳಿಮನಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಬಂದ್ ವಾಪಸ್
ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ಬಂದ್ಗೆ ಇಂದು ನೀಡಿದ್ದ ಕರೆಯನ್ನು ವಾಪಸ್ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ ನಡಿಯಿತು. ನಗರದಲ್ಲಿ ಎಂದಿನಂತೆ ಈ ದಿನ ಕೂಡಾ ಜನ ಜೀವನ ಶುರುವಾಗಿದೆ. ಸಾರಿಗೆ ಇಲಾಖೆ ಬಸ್ಗಳ ಸಂಚಾರ ಆಂಭಿಸಿವೆ. ಹೋಟೆಲ್ಗಳು ತೆರೆದಿದ್ದು, ಆಟೋ ಸಂಚಾರವಿದೆ. ಹಾಗೂ ಶಾಲಾ ಕಾಲೇಜುಗಳು ತೆರದಿವೆ ವಿದ್ಯಾರ್ಥಿಗಳು ಸಹಿತ ಶಾಲೆಗಳಿಗೆ ತೆರುಳುತ್ತಿದ್ದಾರೆ. ಒಟ್ಟಿನಲ್ಲಿ ಉತ್ತರ ಕರ್ನಾಟಕ ಬಂದ್ ಗೆ ಪೇಡಾನಗರದಲ್ಲಿ ಯಾವುದೇ ಬೆಂಬಲ ಇಲ್ಲ ಎಂದು ವ್ಯಕ್ತವಾಗಿದೆ.
ಗದಗದಲ್ಲಿ ಎಂದಿನಂತೆ ಜನಜೀವನ:
ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗದಗ ಜಿಲ್ಲೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಂದ್ ಕರೆಗೆ ಯಾವುದೇ ಬೆಂಬಲ ದೊರೆತಿಲ್ಲ. ಸಂಘಟನೆಗಳು ಬಂದ್ ಬೆಂಬಲ ಹಿಂಪಡೆಯುವ ಮೂಲಕ ಅಖಂಡ ಕರ್ನಾಟಕವನ್ನ ಎತ್ತಿಹಿಡದಿದ್ದಾರೆ. ರಾಜ್ಯ ಒಡೆಯುವಂತಹ ಜನ್ರಿಗೆ ಉತ್ತರ ಕರ್ನಾಟಕ ಮಂದಿ ತಕ್ಕಪಾಠ ಕಲಿಸಿದ್ದಾರೆ. ಅಭಿವೃದ್ದಿಗಾಗಿ ನಮ್ಮ ಹೋರಾಟ ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ. ಒಗ್ಗಟ್ಟಿನ ಮೂಲಮಂತ್ರ ಜಪಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ಶಾಲಾ-ಕಾಲೇಜ್, ಸರ್ಕಾರಿ ಕಛೇರಿಗಳು, ಬಸ್, ಅಟೋ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. “ಕನ್ನಡಾಂಬೆಗೆ ಜೈವಾಗಲಿ” “ಕರ್ನಾಟಕ ಮಾತಾಕಿ ಜೈ” “ಒಂದೇ ಮಾತರಂ” ಎಂಬ ಘೋಷಣೆಗಳೊಂದಿಗೆ ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಒಂದು ಎಂಬುದನ್ನ ಮತ್ತೊಮ್ಮೆ ಸಾರಿ ಸಾರಿ ಹೇಳಿದ್ದಾರೆ. ಇನ್ನು ಕೆಲ ಕನ್ನಡಪರ ಸಂಘಟನೆಗಳು ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಗದಗ ಜಿಲ್ಲೆಯಲ್ಲೂ ಪ್ರತ್ಯೇಕ ರಾಜ್ಯಕ್ಕೆ ಗುಡ್ ಬಾಯ್ ಹೇಳುವ ಮೂಲಕ ಕನ್ನಡಿಗರೆಲ್ಲಾ ಒಂದೆ ಎಂದು ಸಾಭೀತುಮಾಡಿ ತೋರಿಸಿದ್ದಾರೆ.