ಮುಂಬೈ:ಏಷ್ಯನ್ ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ಹಾಗೂ ಆರ್ ಬಿಐನ ಹಣಕಾಸು ನೀತಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಇಂದು ಕುಸಿತದ ಹಾದಿ ಹಿಡಿದಿದೆ.ಇದಕ್ಕೆ ತುಪ್ಪ ಸುರಿಯುವಂತೆ ಮತ್ತೆ ಅಮೆರಿಕ – ಚೀನಾ ನಡುವಣ ವ್ಯಾಪಾರ ಯುದ್ಧ ಶುರುವಾಗಿರುವುದರಿಂದ ಇದು ಸೆನ್ಸೆಕ್ಸ್ ಮೇಲೂ ಪ್ರಭಾವ ಬೀರಿದೆ.
ಇಂದು ಸೆನ್ಸಕ್ಸ್ 291 ಅಂಶಗಳ ಕುಸಿತ ಕಂಡು 37229 ಅಂಕಗಳಿಗೆ ಇಳಿಕೆ ಕಂಡಿತು. ಇನ್ನು ರಾಷ್ಟ್ರೀಯ ಷೇರು ಸೂಚ್ಯಂಕ 11263 ಅಂಕಗಳಿಗೆ ಇಳಿಕೆ ಕಂಡಿದೆ. ಇನ್ನು ಜಪಾನ್, ಚೀನಾದ ಶಾಂಘೈ, ಹಾಂಕಾಂಗಾ ಮಾರುಕಟ್ಟೆಗಳು 1- 2.5 ರಷ್ಟು ಕುಸಿತ ಕಂಡವು.
ಅಮೆರಿಕ ಸರ್ಕಾರ ಚೀನಾ ವಸ್ತುಗಳ ಮೇಲೆ ಶೇ 1- -25 ರಷ್ಟು ತೆರಿಗೆ ವಿಧಿಸಿದೆ. ಇದು ಚೀನಾದ ಮೇಲೆ ಭಾರಿ ಪರಿಣಾಮ ಬೀರಿದೆ. ಇನ್ನು ಬ್ಯಾಂಕಿಂಗ್ ಷೇರುಗಳು ಆರ್ಬಿಐ ಮತ್ತೆ ರೆಪೋ ದರಗಳನ್ನ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಕುಸಿತ ಕಂಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್. ಶೇ. 1.9, ಬ್ಯಾಂಕ್ ಆಫ್ ಬರೋಡಾ ಶೇ.1.8, ಎಸ್ಬಿಐ ಹಾಗೂ ಐಸಿಐಸಿಐ ಷೇರುಗಳ ಬೆಲೆಯಲ್ಲಿ ಶೇ 1.2 ರಷ್ಟು ಕುಸಿತ ಕಂಡಿದೆ.