
ಬೆಂಗಳೂರು, ಆ. 2-ಯುವಕನೊಬ್ಬ ಒಂಭತ್ತು ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಬೇಗೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಆರೋಪಿ ಬೇಗೂರು ರಾಘವೇಂದ್ರ ಬಡಾವಣೆ ನಿವಾಸಿ ಶಕ್ತಿವೇಲು (21) ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೆÇಲೀಸರು ಬಲೆ ಬೀಸಿದ್ದಾರೆ.
ರಾತ್ರಿ 8.30ರ ಸುಮಾರಿಗೆ ರಾಘವೇಂದ್ರ ಬಡಾವಣೆಯಲ್ಲಿರುವ ತನ್ನ ಮನೆಯ ಮುಂಭಾಗ ಯುವತಿ ನಿಂತಿದ್ದಳು. ಅಲ್ಲಿಗೆ ಬಂದ ಶಕ್ತಿವೇಲು ಬಾಲಕಿಯನ್ನು ಸಮೀಪದಲ್ಲಿದ್ದ ತನ್ನ ಮನೆಗೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಬಾಲಕಿ ಮನೆಗೆ ಬಂದು ವಿಷಯ ತಿಳಿಸಿದ್ದು, ತಕ್ಷಣ ಪೆÇೀಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ವೈದ್ಯರ ಹೇಳಿಕೆ ಹಿನ್ನೆಲೆಯಲ್ಲಿ ಬೇಗೂರು ಪೆÇಲೀಸರು ಶಕ್ತಿವೇಲು ವಿರುದ್ಧ ಪೆÇೀಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ.