ಮೈಸೂರು: ಒಡೆಯರ್ ಚಿತ್ರದ ಟೈಟಲ್ ಗೆ ನಮ್ಮ ಅಭ್ಯಂತರವೇನು ಇಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ,
ಮೈಸೂರಿನಲ್ಲಿ ಆಯೋಜಿಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 225ನೇ ಜನ್ಮದಿನಾಚರಣೆಯಲ್ಲಿ ಪ್ರಮೋದಾ ದೇವಿ ಪಾಲ್ಗೊಂಡಿದ್ದರು. ಈ ವೇಳೆ ಒಡೆಯರ್ ಟೈಟಲ್ ಬಗ್ಗೆ ಪ್ರತ್ರಿಕ್ರಿಯಿಸಿದ ಅವರು, ಸಿನಿಮಾಗೆ ಒಡೆಯರ್ ಎಂದು ಹೆಸರು ಇಡಲು ನಮ್ಮ ಅಭ್ಯಂತರವಿಲ್ಲ. ಆದರೆ, ರಾಜ ಮನೆತನದ ಬಗ್ಗೆ ಏನಾದರೂ ಚಿತ್ರಿಸಿದರೆ ಖಂಡಿತ ಆಕ್ಷೇಪ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ.
ಒಡೆಯರ್ ಹೆಸರು ನಮಗೆ ಬಳುವಳಿಯಾಗಿ ಬಂದಿದ್ದರೂ ಅದನ್ನು ತುಂಬ ಜನರು ಇಟ್ಟುಕೊಂಡಿದ್ದಾರೆ. ಹಾಗಾಗಿ ಚಲನಚಿತ್ರಕ್ಕೆ ಆ ಹೆಸರು ಇಡಬಹುದು. ಆದರೆ, ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಏನಾದರೂ ಚಿತ್ರಣವಿದ್ದರೆ ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಟೈಟಲ್ ವಿವಾದ ನನ್ನ ಗಮನಕ್ಕೆ ಬಂದ ಮೇಲೆ ನಾನು ಈ ಸಂಬಂಧ ಪ್ರೊಡಕ್ಷನ್ ಹೌಸ್ ಗೆ ಪತ್ರ ಬರೆದಿದ್ದೆ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.