ಹುಬ್ಬಳ್ಳಿ:- ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಮತ್ತು ಸಂಸದ ಪ್ರಲ್ಹಾದ ಜೋಶಿ ಅವರು ಕೊಲೆಗಾರರು ಅವರ ವಿರುದ್ಧ ಕಲಂ 302 ರ ಪ್ರಕರಾ ಕೊಲೆ ಪ್ರಕರಣ ದಾಖಲಿಸಬೇಕೆಂದು ಉತ್ತರ ಕರ್ನಾಟಕ ಜನ ಶಕ್ತಿ ರಾಜ್ಯಾಧ್ಯಕ್ಷ ಎಸ್ ಶಂಕರಣ್ಣ ಒತ್ತಾಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಎಂದರು. ಯಾವುದೇ ಯೋಜನೆ ಅನುಷ್ಠಾನಕ್ಕೆ ಬರುವ ಮೊದಲೇ ದೊಡ್ಡ ಪೋಸ್ಟರ್ ಗಳನ್ನು ಹಾಕಿಕೊಂಡು ಪೋಸ್ ಕೊಡುತ್ತಾರೆ. ಸ್ಮಾರ್ಟ್ ಸಿಟಿ ಯೋಜನೆ ಒಂದೇ ಒಂದು ಇಟ್ಟಿಗೆ ಕೂಡ ಇನ್ನು ಇಟ್ಟಿಲ್ಲ. ಆದರೆ, ಚುನಾವಣೆ ದೃಷ್ಠಿಯಿಂದ ನಾವೇ ಸ್ಮಾಟ್ರ್ ಸಿಟಿ ತಂದವರು ಎಂದು ಹೇಳಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ ದೊಡ್ಡ ದೊಡ್ಡ ಬ್ರಿಡ್ಜ್ ಸೇರಿದಂತೆ ಅನೇಕ ಯೋಜನೆಗಳು ಪೂರ್ಣಗೊಳ್ಳುತ್ತವೆ. ಆದರೆ, 6 ವರ್ಷ ಕಳೆದರು ಬಿಆರ್.ಟಿಎಸ್. ಯೋಜನೆ ಪೂರ್ಣಗೊಂಡಿಲ್ಲ. ಬಿಆರ್.ಟಿ.ಎಸ್. ಯೋಜನೆ ಹಿನ್ನೆಲೆ ನೂರಾರು ಜನರು ಅಸು ನೀಗಿದ್ದಾರೆ. ಹೀಗಾಗಿ ಬಿಆರ್.ಟಿಎಸ್. ಯೋಜನೆ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೆಕೆಂದು ಆಗ್ರಹಿಸಿದರು. ಅಷ್ಟೇ ಅಲ್ಲದ ಊರಲ್ಲಿರುವ ರಸ್ತೆಗಳು ಗುಂಡಿಗಳು ತುಂಬಿವೆ. ಅಷ್ಟೃ ದೊಡ್ಡ ಸಂಖ್ಯೆಯಲ್ಲಿ ಊರ ತುಂಬ ಎಂ.ಆರ್.ಪಿ. ವೈನ್ ಸ್ಟೋರ್ ಗಳು ತೆರೆಯಲಾಗಿದೆ. ಕಡಿಮೆ ದರದಲ್ಲಿ ಕುಡಿಯಿರಿ, ರಸ್ತೆ ಗುಂಡಿಯಲ್ಲಿ ಬಿದ್ದು ಸಾಯಿರಿ ಎಂಬಂತಾಗಿದೆ ಹುಬ್ಬಳ್ಳಿ ಸ್ಥಿತಿ. ಹೀಗಾಗಿ ಉತ್ತರ ಕರ್ನಾಟಕ ಅಭಿವೃದ್ದಿಗೆ ಜನಪ್ರತಿನಿಧಿಗಳು ಒತ್ತು ನೀಡಬೇಕೆಂದು ಆಗ್ರಹಿಸಿದ್ದಾರೆ.