ಕೆಲವು ನಿರ್ದೇಶಕರು-ನಟರ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕುತ್ತದೆ. ಅಂತವರಲ್ಲೊಬ್ಬರು ಸಿಂಪಲ್ ಸುನಿ ಮತ್ತು ದಿಗಂತ್. ಪುಷ್ಕರ್ ಫಿಲ್ಮ್ಸ್ ನಡಿ ಚಿತ್ರವೊಂದು ತಯಾರಾಗುತ್ತಿದ್ದು ರೊಮ್ಯಾಂಟಿಕ್ ಆಧಾರಿತ ಚಿತ್ರವಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯನವರು ನಿರ್ಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ದಿಗಂತ್ ಮತ್ತು ಸಿಂಪಲ್ ಸುನಿ ಒಂದಾಗುತ್ತಿದ್ದಾರೆ. ಪುಷ್ಕರ್ ನಿರ್ಮಾಣದ ದಿಗಂತ್ ನಟನೆಯ ಕಥೆಯೊಂದು ಶುರುವಾಗಿದೆ ಈ ವಾರ ತೆರೆ ಕಾಣುತ್ತಿದೆ. ಹೀಗಾಗಿ ಇವರಿಬ್ಬರು ಎರಡನ ಬಾರಿಗೆ ಸಿನಿಮಾಕ್ಕೆ ಒಂದಾಗುತ್ತಿದ್ದಾರೆ. ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪುಷ್ಕರ್, ಗಾಳಿಪಠ ಮತ್ತು ಪಂಚರಂಗಿ, ಮನಸಾರೆ ಸಿನಿಮಾ ನೋಡಿದಲ್ಲಿನಿಂದ ನಾನು ದಿಗಂತ್ ಅವರ ಅಭಿಮಾನಿಯಾಗಿದ್ದೇನೆ. ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಒಟ್ಟಿಗೆ ಕೆಲಸ ಮಾಡುವ ಮೂಲಕ ನಾವು ಒಬ್ಬರಿಗೊಬ್ಬರು ಹೆಚ್ಚು ಪರಿಚಿತರಾಗಿದ್ದೇವೆ. ಈ ಮಧ್ಯೆ ಸುನಿ ಮತ್ತು ನಾನು ರೊಮ್ಯಾಂಟಿಕ್ ಚಿತ್ರವೊಂದನ್ನು ಮಾಡಲು ಕಳೆದ ಎರಡು ವರ್ಷಗಳಿಂದ ಯೋಜನೆ ಹಾಕಿಕೊಳ್ಳುತ್ತಿದ್ದೆವು. ಪೂರ್ವಕೆಲಸಗಳ ಬದ್ಧತೆಯಿಂದಾಗಿ ಅದು ಇದುವರೆಗೆ ಕೈಗೂಡಿರಲಿಲ್ಲ. ಇದೀಗ ಅವರ ಬಜಾರ್ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಹಾಗಾಗಿ ನನ್ನ ಚಿತ್ರವನ್ನು ಮುಂದೆ ನಿರ್ದೇಶಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು. ಇನ್ನೂ ಹೆಸರಿಡದ ಈ ಚಿತ್ರ ನವೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.
Related Articles
ನಟನ ಯಶಸ್ಸು ಚಿತ್ರದ ಕಥೆಯನ್ನು ಅವಲಂಬಿಸಿರುತ್ತದೆ: ದಿಗಂತ್
Seen By: 55 ಶುಕ್ರವಾರ ದಿಗಂತ್ ಅವರ ಕಥೆಯೊಂದು ಶುರುವಾಗಿದೆ ಚಿತ್ರ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಬಗ್ಗೆ ದಿಗಂತ್ ಗೆ ಆರು ವರ್ಷಗಳ [more]