ಇದು ’ಕಥೆಯೊಂದು ಶುರುವಾಗಿದ” ಚಿತ್ರದ ನಟಿ ಪೂಜಾ ಕಥೆ!

ಬೆಂಗಳೂರು: ಯಾವುದೇ ಭಾಷೆಯಲ್ಲಿ ಒಂದು ಸುಂದರವಾದ ಕಥೆ ಸೃಷ್ಟಿಯಾದಾಗ ಅದರ ಪಾತ್ರಗಳಲ್ಲಿ ನಟಿಸುವ ನಟ ನಟಿಯರು ಸಹ ವಿಭಿನ್ನವಾಗಿರುತ್ತಾರೆ. ಸೆನ್ನಾ ಹೆಗ್ಡೆ ನಿರ್ದೇಶನದ ಪ್ರಥಮ ಚಿತ್ರ ’ಕಥೆಯೊಂದು ಶುರುವಾಗಿದೆ’ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿರುವ ನಟಿ ಪೂಜಾ ದೇವರಿಯಾ ತಮ್ಮ ಚೊಚ್ಚಲ ಕನ್ನಡ ಚಿತ್ರದಲ್ಲೇ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚೆನ್ನೈ ನಲ್ಲಿ ಹುಟ್ಟಿ ಬೆಳೆದ ಪೂಜಾ ಅವರ ತಾಯಿ ಕನ್ನಡತಿಯಾಗಿರುವುದು ಪೂಜಾ ಅವರಿಗೆ ಕರ್ನಾಟಕದ ನಂಟು ಬರಲು ಕಾರಣವಾಗಿದೆ. ಆದರೆ ಪೂಜಾಗೆ ಕನ್ನಡದ ಸರಿಯಾದ ಉಚ್ಚಾರಣೆ, ಧ್ವನಿ ಸಂಯೋಜನೆಗೊಳಿಸಿಕೊಳ್ಳುವುದು ಇದೀಗ ಸವಾಲಾಗಿ ಪರಿಣಮಿಸಿದೆ.
“ಚಿತ್ರೀಕರಣದ ಸಮಯದಲ್ಲಿ ಡಬ್ಬಿಂಗ್ ಬದಲಿಗೆ ಸಂಭಾಷಣೆಯನ್ನು ರೆಕಾರ್ಡಿಂಗ್ ಮಾಡಲು ನಿರ್ದೇಶಕ ಆದ್ಯತೆ ನೀಡಿದ್ದದ್ದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಸಿಂಕ್ ಶಬ್ದವನ್ನು ಬಳಸಿದ್ದ ಚಿತ್ರದ ಭಾಗವಾಗಿ  ಬರುವ ಸಂಭಾಷಣೆಯ ಸ್ಪಷ್ಟತೆ ನಿಜಕ್ಕೂ ಕಠಿಣವಾಗಿದೆ. ನನಗೆ ಕನ್ನಡ ತಿಳಿದಿದ್ದರೂ ಹೆಚ್ಚು ಮಾತನಾಡುವ ಅವಕಾಶ ದೊರಕಿರಲಿಲ್ಲ. ಇದೀಗ ನನಗೆ ನಿರ್ದೇಶಕರು ಉಚ್ಚಾರ ಹಾಗೂ ವಾಕ್ ಶುದ್ದತೆಗಾಗಿ ನನಗೆ ಸಹಕಾರ ನಿಡುತ್ತಿದ್ದಾರೆ. ಹೀಗಾಗಿ ನಾನು ಭಾಷೆಯ ಮೇಲೆ ಹಿಡಿತ ಸಾಧಿಸಿಕೊಳ್ಳುವುದು ಸಾಧ್ಯವಾಗಿದೆ” ಪೂಜಾ ಹೇಳಿದ್ದಾರೆ.
“ರಂಗಭೂಮಿಯಲ್ಲಿ ಒಂದು ದಶಕದ ಅನುಭವವಿದೆ, ಒಮ್ಮೆ ಒಳಹೊಕ್ಕ ಬಳಿಕ ಮತ್ತೆ ಹಿಂತಿರುಗುವ ಯಾವ ಅವಕಾಶವಿಲ್ಲ ಎಂದು ನಾನು ತಿಳಿದಿದ್ದೇನೆ.ನಾನು ಎರಡು ತಾಸಿನ ನಾಟಕಗಳಲ್ಲಿ ಸುದೀರ್ಘ ಸಂಬಾಷಣೆಯನ್ನು ಒಳಗೊಂಡು ಅಭಿನಯಿಸುತ್ತೇನೆ. ನಾನು ರಂಗಭೂಮಿಯ ಹಿನ್ನೆಲೆ ಇರುವವಳಾಗಿದ್ದು ಚಲನಚಿತ್ರ ಕ್ಷೇತ್ರದಲ್ಲಿ ಸಹ ನನಗೆ ಇದೇ ಅನುಭವ ನೆರವಿಗೆ ಬರುತ್ತದೆ. ರಂಗಭೂಮಿಯ ಅನುಭವದಿಂದಾಗಿ ನಾನು ಕ್ಯಾಮೆರಾವನ್ನು ವಿಶ್ವಾಸದಿಂದ ಎದುರಿಸಬಲ್ಲೆ ಎಂಬಲ್ಲಿ ಯಾವುದೇ ಸಂದೇಹವಿಲ್ಲ ” ಅವರು ಹೇಳಿದ್ದಾಎ.ಜುಲೈ 29ಕ್ಕೆ ತನ್ನ 27 ನೇ ಹುಟ್ಟುಹಬ್ಬವನ್ನು ಆಚರಿಸಿಸ್ಕೊಳ್ಳುವ ತಯಾರಿಯಲ್ಲಿರುವ ಪೂಜಾಗೆ ’ಕಥೆಯೊಂದು ಶುರುವಾಗಿದೆ’ ಚಿತ್ರ ಬ್ರೇಕ್ ನೀಡುವ ವಿಶ್ವಾಸವಿದೆ.”ಇದೊಂದು ನೀಟಾದ ರೊಮ್ಯಾಂತಿಕ್ ಹಾಸ್ಯ ಪ್ರಧಾನ ಚಿತ್ರ ಇದರಲ್ಲಿ ಯಾವುದೇ ರೀತಿಯ ದೈಹಿಕ ಸ್ಪರ್ಷದ ದೃಶ್ಯಗಳಿಲ್ಲ.ಇಲ್ಲಿ ಎಲ್ಲವೂ ಸಂಭಾಷಣೆ ಹಾಗೂ ಅಭಿವ್ಯಕ್ತಿಯ ಮೂಲಕವೇ ತೋರಿಸಲಾಗಿದೆ. ವಿಭಿನ್ನ ವಯೋಮಾನದವರಿಗೆ ಹೊಂದುವ ಕಥೆ ಇದು. ಇಲ್ಲಿ ಅಶ್ವಿನ್ ರಾವ್ ಪಲ್ಲಕ್ಕಿ ಮತ್ತು ಶ್ರೇಯಾ ಅಂಚನ್  ಅರುಣಾ ಬಾಲರಾಜ್ ಹಾಗು ಬಾಬು ಹಿರಣ್ಣಯ್ಯ ಇದ್ದಾರೆ.”
ಆಯ್ಕೆ ವಿಚಾರಕ್ಕೆ ಬಂದಾಗ ತಾನು ಬಹಳ ಚೂಸಿಯಾಗುತ್ತೇನೆಂದು ಪೂಜಾ ಒಪ್ಪಿಕೊಳ್ಳುತ್ತಾರೆ.  ಅದಕ್ಕಾಗಿಯೇ ಅವರು 2011 ರಲ್ಲಿ ಅವರು ಚಿತ್ರರಂಗಕ್ಕೆ ಬಂದರೂ ಅವರ ಮುಂದಿನ ಚಿತ್ರ ಐದು ವರ್ಷಗಳ ಬಳಿಕ ಹೊರಬಂದಿದೆ.ಕಲೆ, ಥಿಯೇಟರ್, ಡಿಜಿಟಲ್ ಸಬ್ಜೆಕ್ಟ್, ಮತ್ತು ನಟನೆಯಂತಹಾ ವಿಭಿನ್ನ ಮಾಧ್ಯಮಗಳ ಬಳಸುವ ಈಕೆಗೆ ಯಾರಿಗೂ ಸ್ಪರ್ಧೆ ಒಡ್ಡಬೇಕೆನ್ನುವ ಭಾವನೆ ಇಲ್ಲ. “ಚಿತ್ರೋದ್ಯಮದಲ್ಲಿ ನನ್ನಮಹತ್ವದ ವರ್ಷವೆಂದರೆ ಅದು 2016 ಆಗಿತ್ತು. ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೊಂದಿಗೆ ಚಿತ್ರದ ನಿರ್ಮಾಪಕ ರಕ್ಷಿತ್ ಶೆಟ್ಟಿ ’ಕಥೆಯೊಂದು… ಚಿತ್ರದ ಕಥೆ ಇಟ್ಟುಕೊಂಡು ಬಂದು ನನ್ನನ್ನು ಕಂಡಾಗ ನಾನು ತುಂಬಾ ಖುಷಿಪಟ್ಟಿದ್ದೆ”  ಎನ್ನುವ ಪೂಜಾಗೆ ಚಿತ್ರಕ್ಕೆ ಸಹಿ ಮಾಡಿದ ಬಳಿಕ ಸೆಟ್ ನಲ್ಲಿರುವ .ಒಂದು ಉತ್ಸಾಹಭರಿತ ವಾತಾವರಣ ಮತ್ತು ಸಹಾಯಕ ಪಾತ್ರವರ್ಗ ಮತ್ತು ಸಿಬ್ಬಂದಿಗಳ ಕ<ಡು ಸಂತಸವಾಗಿತ್ತು.
“ನಾವು ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ, ಈ ಚಿತ್ರದ ಚಿತ್ರೀಕರಣದ ವೇಳೆ ಸಹ ನಾವು ಒಬ್ಬರಿಗೊಬ್ಬರು ಔಪಚಾರಿಕವಾಗಿ ಪರಿಚಯಿಸಲ್ಪಟ್ಟೆವು.  ನಾವು ಪರಸ್ಪರರ ಚಲನಚಿತ್ರಗಳನ್ನು ನೋಡಲು ಪ್ರಾರಂಭಿಸಿದ್ದೆವು.- ಅವರ ಎರಡು ಚಲನಚಿತ್ರಗಳಾದ ಲೈಫು ಇಷ್ಟೇನೆ, ಪಂಚರಂಗಿಯನ್ನು ನೋಡಿ  ನಾನು ಅವರು ಯಾವ ರೀತಿಯ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವುದು ಅರಿತುಕೊಂಡೆ. ಈ ಚಿತ್ರದಲ್ಲಿ ನಟಿಸಲು ದಿಗಂತ್ ಸಹ ನನಗೆ ಸಹಾಯ ಮಾಡಿದಾರೆ” ಚಿತ್ರದಲ್ಲಿ ಪೂಜಾ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ದಿಗಂತ್ ಬಗೆಗೆ ನಟಿ ಹೇಳಿದ್ದಾರೆ.
ನಿರ್ದೇಶಕ ಸೆನ್ನಾ ಹೆಗ್ಡೆ ಅವರೊಂದಿಗೆ ಕಥೆಯೊಂದು… ಚಿತ್ರದ ಕುರಿತ ನನ್ನ ಮೊದಲ ಚರ್ಚೆಯಲ್ಲಿ ನಾವು ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದ್ದೆವು. ಸುಮಾರು 40 ನಿಮಿಷಗಳ ನಂತರ, ನಾನು ಕನ್ನಡವನ್ನು ತಿಳಿದಿದ್ದೇನೆಯೆ ಎಂದು ಅವರು ಕೇಳಿದ್ದರು. ನಾನು ’ಯಸ್’ ಎಂದಿದ್ದೆ ಆದರೆ ತಕ್ಷಣವೇ ನಾನು ಕನ್ನಡ ರಿತರೂ ನನಗೆ ದಿನನಿತ್ಯದ ಬಳಕೆಯ ಮಾತನಾಡಲು ಬರುವುದಿಲ್ಲ ಎಂದು ಒಪ್ಪಿಕೊಂಡಿದ್ದೆ. ನನ್ನ ಅಜ್ಜಿ ಮತ್ತು  ಹಲವು ಜನರಿಂದ ಸಹಾಯ ಪಡೆದು ಕನ್ನಡದಲ್ಲಿ ಮಾತನಾಡಲು ನಾನು ಪ್ರಯತ್ನಿಸುತ್ತಿದ್ದೆ. ನನ್ನ ಕನ್ನಡ ಕಲಿಕೆ ಕುರಿತಂತೆ ತಿಳಿದಿದ್ದ ಸೆನ್ನಾ ನನಗೆ ಸ್ಕ್ರಿಪ್ಟ್ ಕಲಿಯಲು ತಿಂಗಳ ಕಾಲ ಅವಕಾಶ ಕಲ್ಪಿಸಿದ್ದರು ಎಂದು ಪೂಜಾ ವಿವರಿಸೊದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ