ಬೆಂಗಳೂರು: ಅನೀಶ್ ತೇಜೇಶ್ವರ್ ನಾಯಕನಾಗಿರುವ “ವಾಸು ನಾನ್ ಪಕ್ಕಾ ಕಮರ್ಷಿಯಲ್” ಚಿತ್ರ ಇದಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಇದೀಗ ಚಿತ್ರ ನಿರ್ದೇಶಕ ಅಜಿತ್ ವಾಸನ್ ಉಗ್ಗಿನ ಈ ಚಿತ್ರ ಆಸಕ್ತಿದಾಯಕ ಹಿನ್ನಲೆ ಹೊಂದಿದೆ ಎನ್ನುವ ಮೂಲಕ ಪ್ರೇಕ್ಷಕರ ಆಸಕ್ತಿಯನ್ನು ಇನ್ನಷ್ಟು ಕೆರಳಿಸಿದ್ದಾರೆ.
“ನಿಜ ಜೀವನದಲ್ಲಿ ನನ್ನ ನಿಕ್ ನೇಮ್ ವಾಸು ಎಂದಿದ್ದುಚಿತ್ರದ ಶೀರ್ಷಿಕೆ ಅಕರ್ಷಕವಾಗಿ ಮೂದಿ ಬರಲೆಂದು ’ವಾಸು’ ಎಂದು ಸೇರಿಸಲು ನಿರ್ಧರಿಸಿದ್ದೆ. ಇದು ನಾಯಕನನ್ನು ಕುರಿತಾಗಿಲ್ಲ, ನಾಯಕಿ ನಿಶ್ವಿಕಾ ನಾಯ್ಡು ಪಾತ್ರದ ಹಿನ್ನೆಲೆಯನ್ನು ಹೊಂದಿದೆ. ಚಿತ್ರವು ಪಕ್ಕಾ ಕಮರ್ಷಿಯಲ್ ಆಗಿರುವುದು ಶಿರ್ಷಿಕೆಯಿಂದಲೇ ಸ್ಪಷ್ಟವಾಗುತ್ತದೆ” ಅಜಿತ್ ವಾಸನ್ ಹೇಳಿದ್ದಾರೆ.
“ನವೀನ್ ರೆಡ್ಡಿ ನಿರ್ದೇಶನದ ಅಕಿರಾ ಚಿತ್ರದಲ್ಲಿ ನಟಿಸುತ್ತಿದ್ದ ಅನೀಶ್ ಗೆ ನಾನು ವಾಸು ಕಥೆ ಕುರಿತಂತೆ ಹೇಳಿದ್ದೆ. ಬಳಿಕ ನಾನು ತಮಿಳು, ತೆಲುಗಿನಲ್ಲಿ ಕೆಲ ಚಿತ್ರನಿರ್ಮಾಣ ಮಾಡಲು ಅಮೆರಿಕಾಗೆ ತೆರಳಿದ್ದೆ, ಆದರೆ ಅನೀಶ್ ನಾನು ಹೇಳಿದ್ದ ’ವಾಸು’ ಕಥೆಯನ್ನು ಮರೆತಿರಲಿಲ್ಲ, ಅವರು ಮತ್ತೆ ನನ್ನನ್ನು ಸಂಪರ್ಕಿಸಿ ಕಥೆಯನ್ನು ಚಿತ್ರವಾಗಿಸಲು ಕೇಳಿದ್ದರು. ಇದರಂತೆ ನಾನು ’ವಾಸು….’ ವನ್ನು ಪುನಃ ಕೈಗೆತ್ತಿಕೊಂಡೆ. ನಾನು ’ಅಕಿರಾ’ ಚಿತ್ರದಲ್ಲಿನ ಅನೀಶ್ ಅಭಿನಯವನ್ನು ಗಮನಿಸಿದ್ದೆ, ಆಗ ನನಗೆ ಚಿತ್ರ ನಿರ್ದೇಶಕ ಹಾಗೂ ನಟನ ನಡುವಿನ ಬಾಂಡಿಂಗ್ ಹೇಗಿರಬೇಕು ಎನ್ನುವುದು ಅರಿವಾಗಿತ್ತು” ’ವಾಸು…’ ಚಿತ್ರದ ಮೂಲಕ ಪ್ರಥಮ ಬಾರಿಗೆ ನಿರ್ದೇಶನಕ್ಕಿಳಿದಿರುವ ಅಜಿತ್ ವಾಸನ್ ಹೇಳಿದ್ದಾರೆ.
“ಒಂದು ಚಿತ್ರದಲ್ಲಿ ಭಾವನಾತ್ಮಕ ಸಂಭಾಷಣೆ, ಜತೆಗೆ ಸಾಕಷ್ಟು ಸಮಯ ಬೇಕು. ಆದರೆ ಕಾರ್ಯನಿರ್ವಾಹಕ ನಿರ್ಮಾಪಕ ಶರತ್ ಗೌಡ ಇದನ್ನು ಅರ್ಥ ಮಾಡಿಕೊಂಡು ನಮಗೆ ಸಹಕಾರ ನೀಡಿದ್ದಾರೆ.ಎಂದು ನಿರ್ದೇಶಕರು ನುಡಿದರು.
’ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರವನ್ನು ಅನೀಶ್ ತೇಜೇಶ್ವರ್ ನಿರ್ಮಾಣ ಮಾಡುತ್ತಿದ್ದಾರೆ.ಅವರು ವಿಂಕ್ ವಿಸ್ಟನ್ ಪ್ರೊಡಕ್ಶ್ಃಅನ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಅಜನೀಶ್ ಬಿ.ಲೋಕನಾಥ್ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಶೀಕಾಂತ್ ಸಂಕಲನವಿದೆ.