ಬೆಳಗಾವಿ: ನನ್ನ ಪತಿ ರಾಜ್ ಕುಂದ್ರಾ ಮತ್ತು ನಾನು ಬೆಳಗಾವಿಯ ಅನಾಥ ಮಕ್ಕಳಿಗೆ ಊಟ, ವಸತಿ ಸೌಲಭ್ಯ ಒದಗಿಸುತ್ತಿದ್ದೇವೆ, ಈ ಕಟ್ಟಡವನ್ನು ನಾವು ಪುನರ್ ನಿರ್ಮಿಸಲು ಬಯಸುತ್ತೇನೆ, ಅದಕ್ಕಾಗಿ ಸುಮಾರು 40 ರಿಂದ 50 ಲಕ್ಷ ರು ಹಣ ಬೇಕಾಗುತ್ತದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಸಲ್ಮಾನ್ ಖಾನ್ ಅರ ದಸ್ ಖಾ ದಮ್ ಕಾರ್ಯಕ್ರಮದಲ್ಲಿ ಗೆದ್ದ 10 ಲಕ್ಷ ರು ಹಣವನ್ನು ಶಿಲ್ಪಾ ಶೆಟ್ಟಿ ಫೌಂಡೇಶನ್ ಮೂಲಕ ಹಣವನ್ನು ಬೆಳಗಾವಿಯ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ನೀಡುವುದಾಗಿ ತಿಳಿಸಿದ್ದರು, ಆದರೆ ಬೆಳಗಾವಿಯ ಯಾವ ಅನಾಥ ಸಂಸ್ಥೆ ಎಂಬುದನ್ನು ಸ್ಪಷ್ಟವಾಗಿ ಹೇಳಿರಲಿಲ್ಲ, ಹೀಗಾಗಿ ಆಕೆಯ ಹೇಳಿಕೆ ಬೆಳಗಾವಿಯ ಅನಾಥಾಶ್ರಮಗಳಲ್ಲಿ ಗೊಂದಲ ಮೂಡಿಸಿತ್ತು.
ನನ್ನ ಮನಸ್ಸಿನಲ್ಲಿ ಅನಾಥರಿಗೆ ಒಂದು ವಿಶೇಷ ಸ್ಥಾನವಿದೆ. ಬೆಳಗಾವಿಯ ಯುವಕ ಒಬ್ಬರೇ ಈ ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಬಗ್ಗೆ ನಾನು ಓದಿದ್ದೆ. ಎಚ್,ಐವಿ ಪೀಡಿತ ಮಕ್ಕಳನ್ನು ಅವರು ಪಾಲನೆ ಪೋಷಣೆ ಮಾಡುತ್ತಿದ್ದಾರೆ, ಅವರನ್ನು ಶಾಲೆಯಲ್ಲು ಸಹ ಸೇರಿಸಿಕೊಳ್ಳುವುದಿಲ್ಲ, ಹೀಗಾಗಿ ಆ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ನೀಡಲು ನಾನು ನಿರ್ಧರಿಸಿದೆ, ಹೀಗಾಗಿ ನಾನು ಅವರನ್ನು ಭೇಟಿ ಮಾಡಿ ಅನಾಥ ಮಕ್ಕಳಿಗೆ ವಸತಿ ಮತ್ತು ಶಿಕ್ಷಣಕ್ಕೆ ಹಣ ನೀಡಿದೆ ಎಂದು ಹೇಳಿದರು.
ಆದರೆ ಬೆಳಗಾವಿಯಲ್ಲಿ ಈ ರೀತಿಯ ಯಾವುದೇ ಅನಾಥಾಶ್ರಮಗಳಿಲ್ಲ ಎಂಬುದು ವಿಚಾರಿಸಿದಾಗ ತಿಳಿದು ಬಂದಿದೆ. ಅದರಲ್ಲೂ ಎಚ್ ಐವಿ ಪೀಡಿತ ಮಕ್ಕಳ ಅನಾಥಾಶ್ರಮವಿಲ್ಲ ಎಂಬುದು ತಿಳಿದು ಬಂದಿದೆ.