ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಹಠಕ್ಕೆ ಬಿದ್ದಿರೋ ಕಾಂಗ್ರೆಸ್, ತನ್ನ ಪ್ರಣಾಳಿಕೆಯಲ್ಲಿ ಮಧ್ಯಮ ವರ್ಗದವರಿಗೆ ದೊಡ್ಡ ಆಫರ್ ಕೊಡಲು ಪ್ಲಾನ್ ಮಾಡ್ತಿದೆ.
35 ವರ್ಷದೊಳಗಿನವರನ್ನು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸುವ ಸಾಧ್ಯತೆ ಇದೆ. ಜುಲೈ 13ರಂದು ನಡೆದ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಆದ್ರೆ ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲ.
ಮಧ್ಯಮ ವರ್ಗ, ಯುವಪೀಳಿಗೆಯನ್ನು ಸೆಳೆಯೋದು ಕಾಂಗ್ರೆಸ್ ತಂತ್ರವಾಗಿದೆ. ಒಟ್ಟಿನಲ್ಲಿ ಮಧ್ಯಮವರ್ಗ, ಯುವಕರನ್ನು ಹಾಗೂ 1.5 ಕೋಟಿಯಷ್ಟು ಹೊಸಮತಗಳನ್ನು ಸೆಳೆಯೋದೇ ಕಾಂಗ್ರೆಸ್ ಉದ್ದೇಶವಾಗಿದೆ. ಸುಮಾರು 80 ಕೋಟಿಯಷ್ಟು ಭಾರತೀಯರು 35 ವರ್ಷದ ಕೆಳಗಿನವರಾಗಿದ್ದಾರೆ ಎನ್ನಲಾಗಿದೆ.