
ಹುಬ್ಬಳ್ಳಿ: ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದರೆ, ಇಲ್ಲಿಯ ಜನಪ್ರತಿನಿಧಿಗಳೇ ಕಾರಣ. ನಂಜುಂಡಪ್ಪ ವರದಿ ಬಂದ ನಂತರ ಸಾಕಷ್ಟು ಜನ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ, ಅವಾಗ ಏಕೆ ಅಭಿವೃದ್ಧಿ ಮಾಡಲಿಲ್ಲ…? ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನಮ್ಮ ನಿಲುವು ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬಾರದು. ಅಖಂಡ ಕರ್ನಾಟಕ ಆಗಿರಬೇಕು, ಪ್ರತ್ಯೇಕ ರಾಜ್ಯ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯವಾಗಿದೆ. ಸಿಎಂ ಕುಮಾರಸ್ವಾಮಿಯವರೇ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಸಭೆ ಕರೆಯಲು ನಿರ್ಧಾರ ಮಾಡಿದ್ದಾರೆ. ನಾನು ನಿನ್ನೆ ಮುಖ್ಯಮಂತ್ರಿಗಳ ಮಾತನಾಡಿದ್ದೇನೆ. ಎಲ್ಲಾ ಹೋರಾಟಗಾರರನ್ನ ಮತ್ತು ಮಾಠಾಧೀಶರನ್ನ ಸಭೆಗೆ ಕರೆಯುತ್ತೇನೆ ಎಂದಿದ್ದಾರೆ. ಸಭೆಗೆ ಎಲ್ಲಾ ಮಾಹಿತಿಗಳನ್ನ ತರಲಿ, ಉತ್ತರ ಕರ್ನಾಟಕಕ್ಕೆ ಏನಾದರೂ ನಾನು ಅನ್ಯಾಯ ಮಾಡಿದ್ದರೆ, ಅದನ್ನ ತಕ್ಷಣ ಸರಿ ಪಡಿಸಿಕೊಳ್ಳುತ್ತೆನೆ ಎಂದಿದ್ದಾರೆ.
ಬಜೆಟ್ನಲ್ಲಿ ಸ್ವಲ್ಪ ಹೆಚ್ಚು ಕಡೆಮೆ ಆಗಿರಬೇಕು. ಹೋರಾಟ ಮಾಡುವವರು ಮತ್ತು ಸ್ವಾಮೀಜಿಗಳೆ ಸಮಯ ಹಾಗೂ ಸ್ಥಳ ನಿಗದಿ ಮಾಡಲಿ. ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ, ಅವರ ಜೊತೆ ಇವರು ಚರ್ಚಿಸಲಿ. ಚರ್ಚೆ ನಂತರ ನಮಗೆ ಅನ್ಯಾಯವಾದ್ರೆ, ಆ ಅನ್ಯಾಯವನ್ನ ಹೇಗೆ ಸರಿಪಡಿಸಬೇಕು ಮತ್ತು ನಮಗೆ ಬರುವಂತ ಯೋಜನೆಗಳನ್ನ ನಮಗೆ ಬರುವಂತೆ ಒತ್ತಾಯ ಮಾಡಬೇಕು. ಅದನ್ನ ಬಿಟ್ಟು ಪ್ರತ್ಯೇಕ ರಾಜ್ಯ ಮಾಡುವುದರಿಂದ ಯಾವ ಪುರುಷಾರ್ಥವನ್ನ ಸಾಧಿಸುವುದಿಲ್ಲ. ಇದರಿಂದ ಏನೂ ಉಪಯೋಗವಿಲ್ಲ.
ನಂಜುಂಡಪ್ಪ ವರದಿ ಬಂದ ನಂತ್ರ ಉತ್ತರ ಕರ್ನಾಟಕದವರೇ ಅನೇಕ ಮುಖ್ಯಮಂತ್ರಿ ಆಗಿದ್ದಾರೆ. ಅವಾಗ ಏಕೆ ಉತ್ತರ ಕರ್ನಾಟಕ ಅಭಿವೃದ್ಧಿ ಏಕೆ ಮಾಡಲಿಲ್ಲ. ಉತ್ತರ ಕರ್ನಾಟಕ ಹಿಂದುಳಿಯಲು ಜನಪ್ರತಿನಿಧಿಗಳೆ ಕಾರಣ. ನಾವು ಎಲ್ಲರೂ ಗಟ್ಟಿಯಾಗಿ ಉಳಿದಿದ್ದರೆ ನಮಗೆ ಈ ಪರಿಸ್ಥಿತಿ ಬರಲಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಬೇಕಾದ್ರೆ ಪಕ್ಷಾತೀತವಾಗಿ, ಒಂದಾಗಿ ಚರ್ಚೆಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಇದು ನನ್ನ ಅನಿಸಿಕೆ. ಬಂದ್ಗಳನ್ನ ಮಾಡುವುದನ್ನ ಮಾಡುವ ಮೊದಲು, ಅನ್ಯಾಯಗಳ ಬಗ್ಗೆ ಲಿಸ್ಟ್ಗಳನ್ನ ಮಾಡಲಿ. ಪಾಟೀಲ್ ಪುಟ್ಟಪ್ಪನವರು ಅಖಂಡ ಕರ್ನಾಟಕ ಇರಬೇಕು ಎಂದು ಮಾತನಾಡಿದವರು. ಈಗ ಅನ್ಯಾಯವಾಗಿದ್ದರ ಬಗ್ಗೆ ಅವರು ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾಡುತ್ತೇನೆ. ಪುಟ್ಟಪ್ಪನವರು ರಾಜ್ಯವನ್ನ ವಿಂಗಡನೆ ಮಾಡುವ ಕೆಲಸಾ ಮಾಡುವುದಿಲ್ಲ ಮತ್ತು ಪ್ರತ್ಯೇಕ ರಾಜ್ಯ ಉತ್ತರ ಕರ್ನಾಟಕ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದರು.