
ಹುಬ್ಬಳ್ಳಿ- ಮಾನಸಿಕ ಅಸ್ವಸ್ಥನೊರ್ವ ಜ್ಯೋತಿಷ್ಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗಿಳಿ ಜ್ಯೋತಿಷ್ಯ ಹೇಳ್ತಾಯಿದ್ದ ಪುಂಡಲೀಕ ಎನ್ನುವಾತನ ಮೇಲೆ ಮಾನಸಿಕ ಅಸ್ವಸ್ಥಗೊಂಡ ವ್ಯಕ್ತಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡು ಪುಂಡಲೀಕನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಹುಬ್ಬಳ್ಳಿ ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ…