ನ್ಯೂಯಾರ್ಕ್:ಜು-27; ವಿಶ್ವಸಂಸ್ಥೆ ಸದ್ಯ ಆರ್ಥಿಕ ಹಿನ್ನಡೆ ಅನುಭವಿಸಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರಾಸ್ ತಿಳಿಸಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಸದಸ್ಯ ರಾಷ್ಟ್ರಗಳು ಕೈ ಜೋಡಿಸಬೇಕೆಂದು ಮನವಿಮಾಡಿದ್ದಾರೆ.
ವಿಶ್ವಸಂಸ್ಥೆ ಮುಖ್ಯಸ್ಥ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಸಮಸ್ಯೆಯ ಕುರಿತಾಗಿ ಹೇಳಿದ್ದಾರೆ. ಜೊತೆಗೆ ಎಲ್ಲ ಸದಸ್ಯ ರಾಷ್ಟ್ರಗಳಿಗೂ ವಿಷಯದ ಗಂಭೀರತೆಯನ್ನು ತಿಳಿಸಿದ್ದಾರೆ.
ಸದಸ್ಯ ದೇಶಗಳು ಆರ್ಥಿಕ ಸಹಾಯದಲ್ಲಿ ವಿಳಂಬ ಮಾಡಿರುವುದೇ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ. ಈ ರೀತಿಯ ಸಮಸ್ಯೆ ಈ ಹಿಂದೆಯೂ ಆಗಿದ್ದರೂ ಇಷ್ಟೊಂದು ಗಂಭೀರ ಹಂತ ತಲುಪಿರಲಿಲ್ಲ.
ಜುಲೈ ಅಂತ್ಯಕ್ಕೆ ಭಾರತ ಸೇರಿದಂತೆ 112 ಸದಸ್ಯ ದೇಶಗಳು ಬಜೆಟ್ ಸಂಬಂಧಿಸಿದಂತೆ ಸಂಪೂರ್ಣ ಹಣ ನೀಡಿವೆ. ಭಾರತ 17.91 ಮಿಲಿಯನ್ ಡಾಲರ್ ಹಣವನ್ನು ಜನವರಿಯಲ್ಲಿ ನೀಡಿತ್ತು.
ಪಾಕಿಸ್ತಾನ,ಬಾಂಗ್ಲಾದೇಶ, ಇಸ್ರೇಲ್, ಸೌದಿ ಅರೇಬಿಯಾ, ಸುಡಾನ್, ಸಿರಿಯಾ, ಬ್ರೆಜಿಲ್ ಅಫ್ಘಾನಿಸ್ತಾನ್ ಸೇರಿದಂತೆ 81 ದೇಶಗಳು ಹಣ ನೀಡದೇ ಬಾಕಿ ಉಳಿಸಿಕೊಂಡಿವೆ.
UN at risk of running out of cash:Secretary-General Antonio Guterres,written to member states regarding the troubling financial situation