ಸಂಸದರ ಎಲ್ಲ ದತ್ತು ಗ್ರಾಮಗಳಲ್ಲೂ ಉಚಿತ ವೈ-ಫೈ!

ಹೊಸದಿಲ್ಲಿ: ದೇಶಾದ್ಯಂತ ಸಂಸದರು ದತ್ತು ಪಡೆದಿರುವ ಎಲ್ಲ ಗ್ರಾಮಗಳಲ್ಲೂ ಉಚಿತ ವೈ-ಫೈ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಂಸದ್​​ ಆದರ್ಶ್ ಗ್ರಾಮ ಯೋಜನೆ ಅಡಿ ಲೋಕಸಭಾ ಸದಸ್ಯರು ದತ್ತು ಸ್ವೀಕರಿಸಿರುವ ಎಲ್ಲ ಹಳ್ಳಿಗಳಿಗೆ ಫ್ರೀ ವೈ-ಫೈ ಸೇವೆ ನೀಡಲಾಗುವುದು ಎಂದು ಪ್ರಸಾರ ಖಾತೆ ರಾಜ್ಯ ಸಚಿವ ಮನೋಜ್​ ಸಿನ್ಹಾ ಲೋಕಸಭೆಯಲ್ಲಿ ಬುಧವಾರ ತಿಳಿಸಿದ್ದಾರೆ.
ದೇಶದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಉಚಿತ ವೈ-ಫೈ ಒದಗಿಸಲು ಸರ್ಕಾರ ಪ್ರಸ್ತಾವನೆ ಹೊಂದಿದೆ. ಗ್ರಾಮಗಳಲ್ಲಿ ಟೆಲಿಕಾಂ ಅಭಿವೃದ್ಧಿ ಪಡಿಸಲು ನಿಟ್ಟಿನಲ್ಲಿ ಬಿಎಸ್​ಎನ್​ಎಲ್​ ಮೂಲಕ 25,000 ವೈ-ಫೈ ಹಾಟ್​ಸ್ಪಾಟ್​ಗಳನ್ನು ಅಳವಡಿಸಲಿದೆ. ಜೊತೆಗೆ ಇತರೆಲ್ಲ ಎಜೆನ್ಸಿಗಳು, ಖಾಸಗಿ ಟೆಲಿಕಂ ಆಪರೇಟರ್​ಗಳೂ ಕೂಡ ಉಚಿತ ವೈ-ಫೈ ಒದಗಿಸುವುದರಲ್ಲಿ ತೊಡಗಲಿದ್ದಾರೆ ಅವರು ತಿಳಿಸಿದರು.
ಭಾರತ್​ ನೆಟ್​ ಯೋಜನೆ ಅಡಿ ಫೈಬರ್​​ ನೆಟ್​ವರ್ಕ್​​ನೊಂದಿಗೆ 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಲು ಸರ್ಕಾರ ಗುರಿ ಹೊಂದಿದೆ. ಈಗಾಗಲೇ ಮೊದಲ ಹಂತದಲ್ಲಿ 2017ರ ಡಿಸೆಂಬರ್​ ಅಂತ್ಯಕ್ಕೆ 1 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿರುವ 1.5 ಲಕ್ಷ ಗ್ರಾಪಂಗಳಿಗೆ 2019 ಮಾರ್ಚ್​ ವೇಳೆ ಹೈ-ಸ್ಪೀಡ್​ ಇಂಟರ್​​ನೆಟ್​​ ಒದಗಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ