ಪಾಕಿಸ್ತಾನ​ ಸಂಸತ್​ ಚುನಾವಣೆ: ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಪಕ್ಷ ಮುನ್ನಡೆ

ಇಸ್ಲಾಮಾಬಾದ್‌ : ಪಾಕಿಸ್ತಾನ ಸಂಸತ್​ ಚುನಾವಣೆ ಏಣಿಕೆ ಕಾರ್ಯ ನಡೆಯುತ್ತಿದ್ದು ಸದ್ಯದ ಮಾಹಿತಿ ಪ್ರಕಾರ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಒಟ್ಟು 342 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 113 ಸ್ಥಾನದಲ್ಲಿ ಪಿಟಿಐ ಮುನ್ನಡೆ ಸಾಧಿಸಿದ್ದರೆ, ಅಕ್ರಮ ಆಸ್ತಿಗಳಿಕೆ  ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಪಾಕಿಸ್ತಾನ ಮುಸ್ಲಿಂ ಲೀಗ್‌ ನವಾಜ್‌ (ಪಿಎಂಎಲ್‌-ಎನ್‌) 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೂರನೇ ದೊಡ್ಡ ಪಕ್ಷವಾದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯು (ಪಿಪಿಪಿ) 43, ಇತರೆ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಪಾಕಿಸ್ತಾನದ ಸೇನೆ  ಯಾರ ಕಡೆ ಒಲವು ವ್ಯಕ್ತಪಡಿಸುತ್ತದೆಯೋ ಅವರೇ ಮುಂದಿನ ಪ್ರಧಾನಿಯಾಗುತ್ತಾರೆ ಎಂಬ  ಮಾತು ಕೇಳಿ ಬರುತ್ತಿತ್ತು.  ಈ ಬಾರಿ ಇಮ್ರಾನ್‌ ಅವರನ್ನು ಸೇನೆ ಬೆಂಬಲಿಸಿದೆ. ಹಾಗಾಗಿ ಈ ಬಾರಿ ಇಮ್ರಾನ್‌ ಅವರೇ ಪ್ರಧಾನಿಯಾಗಬಹುದು ಎನ್ನಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ