ನವದೆಹಲಿ, ಜು.26- ಏರ್ ಏಷ್ಯಾ ವಿಮಾನವೊಂದರಲ್ಲಿ ನಿನ್ನೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಹಸುಳೆಯನ್ನು ಕೊಂದಿರುವ ಶಂಕೆ ಇದೆ. ಗುವಾಹತಿ ಮಾರ್ಗವಾಗಿ ಇಂಫಾಲದಿಂದ ದೆಹಲಿಗೆ ತೆರೆಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ದೆಹಲಿ ಪೆÇಲೀಸರು ಮತ್ತು ಏರ್ಪೆÇೀರ್ಟ್ ಭದ್ರತಾ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದು, ನವಜಾತ ಶಿಶುವಿನ ಮೃತದೇಹವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಸುಳೆಯ ತಾಯಿ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಆಕೆ ಇಂಫಾಲದ ಅಪ್ರಾಪ್ತೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸಿಬ್ಬಂದಿಯೊಬ್ಬರು ವಿಮಾನದ ಶೌಚಾಲಯದೊಳಗೆ ಹಸುಳೆಯ ಮೃತದೇಹ ಪತ್ತೆಯಾಯಿತು. ಟಾಯ್ಲೆಟ್ ಪೇಪರ್ನಿಂದ ಮಗುವಿನ ಬಾಯಿ ಮುಚ್ಚಲಾಗಿತ್ತು. ಮಗು ಜೋರಾಗಿ ಅತ್ತರೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕಾಗಿ ಟಿಶ್ಯೂ ಕಾಗದದಿಂದ ಬಾಯಿಯನ್ನು ಮುಚ್ಚಿ ಕೊಂದಿರಬಹುದೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ನವಜಾತ ಹಸುಳೆಯ ಶವ ವಿಮಾನದ ಶೌಚಾಲಯದಲ್ಲಿ ಪತ್ತೆಯಾಗಿದೆ. ದೆಹಲಿ ಪೆÇಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ವಿಮಾನದೊಳಗೆ(ಶೌಚಾಲಯದಲ್ಲಿ) ಶಿಶು ಜನಿಸಿದೆ ಎಂಬುದನ್ನು ದೆಹಲಿಯ ಐಜಿಐ ವಿಮಾನನಿಲ್ದಾಣದ ವೈದ್ಯಕೀಯ ತಂಡದ ವೈದ್ಯರೊಬ್ಬರು ಖಚಿತಪಡಿಸಿದ್ದಾರೆ. ಈ ಸಂಬಂಧ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಏರ್ ಏಷ್ಯಾದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.