ವಾಷಿಂಗ್ಟನ್:ಜು-25: 2008ರ ಮುಂಬೈ ದಾಳಿಯ ಪ್ರಮುಖ ಆರೊಪಿ ಡೇವಿಡ್ ಹೆಡ್ಲಿ ಚಿಕಾಗೋ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೆಡ್ಲಿ ಪರ ವಕೀಲರು ಹೇಳಿದ್ದಾರೆ.
ಚಿಕಾಗೊ ಜೈಲಿನಲ್ಲಿರುವ ಹೆಡ್ಲಿ ಮೇಲೆ ಸಹಖೈದಿಗಳು ಜೈಲಿನಲ್ಲೇ ನಡೆಸಿದ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಹೆಡ್ಲಿಯನ್ನು ಚಿಕಾಗೋ ಆಸ್ಪತ್ರೆಯ ಐಸಿಯುಗೆ ದಾಖಲಾಗಿದೆ ಎಂದು ಹೇಳಲಾಗಿತ್ತು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಹೆಡ್ಲಿ ಪರ ವಕೀಲ ಜಾನ್ ಥೀಸ್, “ನಾನು ಅವನೆಲ್ಲಿದ್ದಾರೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಆದರೆ ಅವನು ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ ಎಂದು ತಿಳಿಸಿದ್ದಾರೆ.
“ನಾನು ಹೆಡ್ಲಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ, ಭಾರತೀಯ ಮಾದ್ಯಮಗಳ ವರದಿಗೆ ಯಾವ ಆಧಾರವಿಲ್ಲ” ಥೀಸ್ ಹೇಳಿದ್ದಾರೆ.
ಜುಲೈ 8 ರಂದು ಜೈಲಿನಲ್ಲಿ ಇಬ್ಬರು ಸಹಖೈದಿಗಳು ಹೆಡ್ಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಅಂದಿನಿಂದ ಆತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಎನ್ನಲಾಗಿತ್ತು.
ಮುಂಬೈಯ ಮೇಲೆ 2008 ರ ಭಯೋತ್ಪಾದಕ ದಾಳಿಯಲ್ಲಿ 160 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು.ಇದರ ಪ್ರಮುಖ ಆರೋಪಿಯಾಗಿದ್ದ ಹೆಡ್ಲಿಗೆ ಯುಎಸ್ ನ್ಯಾಯಾಲಯವು 35 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
David Headley, Neither In Chicago Nor In Hospital, Says His Lawyer