ಮುಂಬೈ:ಜು-25: ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿ ಮೀಸಲಾತಿಗೆ ಆಗ್ರಹಿಸಿ ಮರಾಠ ಸಮುದಾಯ ಕರೆ ನೀಡಿರುವ ಮುಂಬೈ ಬಂದ್ ಎರಡನೆ ದಿನಕ್ಕೆ ಕಾಲಿಟ್ಟಿದೆ.
ಬಂದ್ ನಿಂದಾಗಿ ಮರಾಠ ಸಮುದಾಯದವರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗ್ಗೆಯಿಂದ ಹಲವೆಡೆ ರಸ್ತೆ ತಡೆ ನಡೆಸಲಾಗಿದೆ.
ಸಕಾಲ ಮರಾಠ ಸಮಾಜ ಹಾಗೂ ಮರಾಠ ಕ್ರಾಂತಿ ಮೋರ್ಚ ಸಂಘಟನೆಗಳ ಕಾರ್ಯಕರ್ತರು ನೆವಿ ಮುಂಬೈ, ಪೆನೆವೆಲ್ ಪ್ರದೇಶದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದು ಎರಡು ಬಸ್ಗಳಿಗೆ ಕಲ್ಲು ತೂರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮಹಾನಗರದಾದ್ಯಂತ ಪೊಲೀಸರು ವ್ಯಾಪಕ ಬಿಗಿ ಬಂದೋ ಬಸ್ತ್ ಮಾಡಿದ್ದಾರೆ. ಅರೆ ಸೇನಾಪಡೆ ಯೋಧರು ಗಸ್ತು ತಿರುಗುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸರಣಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದ ಕಾಕಾಸಾಹೇಬ್ ಶಿಂಧೆ (27) ಔರಂಗಾಬಾದ್ ಜಿಲ್ಲೆಯ ಕನ್ನಡ್ ಗ್ರಾಮದಲ್ಲಿ ಗೋದಾವರಿ ನದಿಗೆ ಹಾರಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರತಿಭಟನೆಯ ತೀವ್ರತೆ ಹೆಚ್ಚಿಸಿದೆ. ಶೀವಸೇನಾ ಕಾರ್ಯಕರ್ತ ಶಿಂಧೆಯ ಆತ್ಮಹತ್ಯೆಯಿಂದ ಕೆರಳಿರುವ ಮರಾಠ ಹೋರಾಟಗಾರರು ಮಂಗಳವಾರ ಮಹಾರಾಷ್ಟ್ರ ಬಂದ್ಗೆ ಕರೆ ನೀಡಿದ್ದರು. ಔರಂಗಾಬಾದ್ ಹೋರಾಟದ ಕೇಂದ್ರ ಬಿಂದುವಾಗಿತ್ತು. ಈಗ ಪ್ರತಿಭಟನೆ ರಾಜ್ಯದ ವಿವಿಧ ಭಾಗಗಳಿಗೆ ವ್ಯಾಪಿಸಿದೆ.
Maratha Protest,Maharashtra bandh,Buses Attacked, Traffic Blocked