ಅಂಗಾಂಶದ ಪೋಷಣೆಯ ವರ್ಧನೆಯಿಂದ ರೋಗ ಮುಕ್ತರಾಗಬಹುದು . ನಿಮಗಿದು ಗೊತ್ತೇ?

ಆರೋಗ್ಯ ಯಾರಿಗೆ ಬೇಡ?  ನಾವೆಲ್ಲರೂ ಆರೋಗ್ಯವಾಗಿರಬೇಕೆಂದು ಬಯಸುತ್ತೇವೆ. ಅದಕ್ಕಾಗಿ ನಾವು ಎನೇನೋ  ಮಾಡುತ್ತೇವೆ; ಒಳ್ಳೆಯ ಆಹಾರ ತಿನ್ನುವುದು, ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು, ಯೋಗ ಮಾಡುವುದು ಇತ್ಯಾದಿ. ಇದನ್ನೆಲ್ಲಾ ಮಾಡಿಯೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದವರು ಬಹಳ.

I Charge Health Drink from Sripala Solutions

ಇದಕ್ಕೆ ಏನು ಕಾರಣ?

  1. ಕಲುಷಿತ ಗಾಳಿ ಈ ಗಾಳಿಯನ್ನೇ ಸೇವಿಸಿ ನಾವು ಪ್ರಾಣಾಯಾಮ ಮತ್ತು ವ್ಯಾಯಾಮ ಮಾಡುತ್ತಿದ್ದೇವೆ. ಈ ಕಲುಷಿತ ಗಾಳಿಯನ್ನು ಬಿಟ್ಟು ಎಲ್ಲಿ ಹೋಗಲು ಸಾಧ್ಯ?
  2. ಕಲುಷಿತ ಅಥವಾ ಸತ್ವರಹಿತ ನೀರು ಅರ ಓ ಫಿಲ್ಟರ್ (RO Filter) ಎಲ್ಲರ ಮನೆಯಲ್ಲೂ ಇದ್ದು, ಅದನ್ನು ಬಳಸಿ, ನೀರಿನಲ್ಲಿರುವ (ದೇಹಕ್ಕೆ ಅವಶ್ಯಕತೆ ಇರುವ) ಖನಿಜಗಳನ್ನು ತೆಗೆದು ಸೇವಿಸುತ್ತೇವೆ.
  3. ವಿಷಪೂರಿತ ಆಹಾರ ನಾವು ಸೇವಿಸುವ ಎಲ್ಲ ಹಣ್ಣು, ತರಕಾರಿ, ದಿನಸಿ, ಇತ್ಯಾದಿ ಕೀಟನಾಶಕಗಳಿಂದ ಕೂಡಿವೆ. ಇದಲ್ಲದೆ ಸತ್ವರಹಿತವು ಆಗಿವೆ, ಏಕೆಂದರೆ ಭೂಮಿ ಕೂಡ ಫಲವತ್ತತೆಯನ್ನು ಕಳೆದುಕೊಂಡಿದೆ,
  4. ಒತ್ತಡಗಳುವಿಧ್ಯಾರ್ಥಿಯರಿಗೆ ಓದಿನ ಒತ್ತಡ, ದುಡಿಯುವವರಿಗೆ ಸಮಯದ ಹಾಗು ಕೆಲಸದ ಒತ್ತಡ, ಇದೆಲ್ಲದರಿಂದ ಮಾನಸಿಕ ಒತ್ತಡ.

ಇವೆಲ್ಲದರ ನಡುವೆ ಆರೋಗ್ಯವಾಗಿರಲು ಸಾಧ್ಯವೇ?  ಹೌದು ಸಾಧ್ಯಾ

ವೈದ್ಯಕೀಯ ಶಿಕ್ಷಣ ಮುಗಿಸಿದ ನನಗೆ, ಜೀವನ ಕಾಯುತಿದದ್ದು ರುಮೆಟಾಯ್ಡ್ ಆರ್ಥರೈಟಿಸ್ನೊಂದಿಗೆ (ಆಮವಾತ). ಬಹಳ ಸಮಯ ಇದರಲ್ಲಿ ನರಳಿದೆ. ಔಷಧಿಗಳು ಕೊಟ್ಟಿದ್ದು ತಾತ್ಕಾಲಿಕ ನೆರವು ಮಾತ್ರ. ಅದರಿಂದ ಹೊರ ಬರಲು ಸಾಧ್ಯವಾದದ್ದು ಸತತ ಸಂಶೋಧನೆ ಮತ್ತು ಪ್ರಯೋಗಗಳಿಂದ ನಾನೇ ಕಂಡುಕೊಂಡ ಹೊಸ ಸತ್ಯ, ಅದುವೇ ಅಂಗಾಂಶದ ಪೋಷಣೆಯ  ವರ್ಧನೆ” (Tissue Nutrition Enhancement)

 

ಅಂಗಾಂಶದ ಪೋಷಣೆಯ ವರ್ಧನೆ ಎಂದರೇನು?

ಪೋಷಣೆ ಎಂದ ಕೂಡಲೇ ನಾವು ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಎಂದು ಅಂದುಕೊಳ್ಳುತ್ತೇವೆ. ನಾವು ತಿಂದ ಆಹಾರ ನಮ್ಮ ದೇಹಕ್ಕೆ ಸೇರುತ್ತಿದೆಯೋ ಇಲ್ಲವೋ ಎಂಬುದರ ಕಡೆಗೆ ನಮ್ಮ ಗಮನವಿಲ್ಲ ಅಥವಾ ತಿಂದ ಆಹಾರವನ್ನು ದೇಹಕ್ಕೆ ಸೇರುವಂತೆ ಮಾಡಬಹುದು ಎಂದು ಕೂಡ ಅರಿವಿಲ್ಲ.

ವೈದ್ಯರ ಪಾತ್ರ ಬರುವುದೇ ಇಲ್ಲಿ.  ನಾನು ನನ್ನ “ಎವೊಲ್ವೆ ಆಂಟಿ-ಎಜೆಯಿಂಗ್ ಕ್ಲಿನಿಕ್” (Evolve Anti-Aging Clinic) ನಲ್ಲಿ ಮಾಡುತ್ತಿರುವ ಕೆಲಸವೇ ಇದು. ನಾನು ನನ್ನನ್ನು ಸ್ವಗುಣ ಪಡಿಸಿದ ಶೈಲಿಯಲ್ಲೇ ಬೇರೆಯವರಿಗೂ ರೋಗ ಮುಕ್ತರನ್ನಾಗಿ ಮಾಡುವುದೇ ನನ್ನ ಧ್ಯೇಯವಾಯಿತು. ಅಂಗಾಂಶ ಪೋಷಣೆಯ ವರ್ಧನೆಯಿಂದ ಕೆಲವು ರೋಗಗಳನ್ನು ನಿಯಂತ್ರಿಸಬಹುದು. ಇನ್ನು ಕೆಲವನ್ನು ಸಂಪೂರ್ಣ ಗುಣ ಪಡಿಸಬಹುದು.

ವಾತ (Rheumatoid Arthritis), ಸಂಧಿವಾತ, ಮಧುಮೇಹ, Knee Replacement ಬೇಕಾದವರು, Prostrate Hypertrophy, ಪಿಸಿಒಡಿ, ಅಲರ್ಜಿ ಕಾಯಿಲೆಗಳು, ಬಂಜೆತನ, ಮೈ ಕೈ ಕಾಲುಗಳ್ಳಲ್ಲಿ ನೋವು, ಮೈಗ್ರೇನ್, ಮೊಡವೆ , ಕೊಲೆಸ್ಟರಾಲ್, ಸ್ಥೂಲಕಾಯತೆ, ಹದಿ ಹರಯದ ತೊಂದರೆಗಳು, ಕೂದಲು ಉದುರುವಿಕೆ,  ಥೈರಾಯ್ಡ್ ಇತ್ಯಾದಿ ತೊಂದರೆಗಳಿಗೆ ಈ ಚಿಕಿಸ್ತೆ ಬಹಳ ಉಪಯುಕ್ತ

ಅಂಗಾಂಶದ ಪೋಷಣೆಯಿಂದ ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ಇಲ್ಲದೆ  ಸೌಂದರ್ಯ ರಕ್ಷಿಸಿಕೊಳ್ಳಬಹುದು, ಕ್ರೀಡಾಪಟುಗಳು ಅವರ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಪ್ಯಾಕಿಂಗ್ ಉದ್ಯಮಗಳಲ್ಲಿ ದುಡಿಯುವರಿಗೆ ಧೂಳಿನಿಂದ ಬರುವ ರೋಗಗಳಿಂದ ಮುಕ್ತರಾಗಬಹುದು

ಚಿಕಿತ್ಸೆ ವಿಧಾನ

ಮೊದಲಿಗೆ ರೋಗಿಯ ದೇಹದಲ್ಲಿರುವ ಟಾಕ್ಸಿನ್ ಅಥವಾ ವಿಷವನ್ನು ಹೊರಹಾಕಲು ನಿರ್ವಿಶೀಕರಣ ಮಾಡಬೇಕು. ಅನಂತರ ಯಾವ ಪೋಷಕಾಂಶಗಳ ಕೊರತೆ ಇದೆ ಎಂಬುದನ್ನು ಪತ್ತೆ ಹೆಚ್ಚಬೇಕು ಮತ್ತು ಅದನ್ನು ಪೂರಕ ಮಾಡಬೇಕಾಗುತ್ತದೆ. ಇದಾದ  ನಂತರ ಫೈಟೋನ್ಯೂಟ್ರಿಯಂಟ್ಗಳ (ಸಸ್ಯ ಪೌಷ್ಟಿಕಾಂಶ) ಬಳಕೆಯಿಂದ ನಾವು ತಿಂದ ಆಹಾರ ನಮ್ಮ ದೇಹವನ್ನು ಸೇರುವಂತೆ ಮಾಡಬೇಕು. ಇದರಿಂದ ದೇಹವು ರೋಗ ಮುಕ್ತ ವಾಗಲು ಸಾಧ್ಯವಾಗುತ್ತದೆ. ಇದಕ್ಕೆಂದೇ ನಾವು ಎವೊಲ್ವೆ ಆಂಟಿ-ಎಜೆಯಿಂಗ್ ಕ್ಲಿನಿಕ್ ನಲ್ಲಿ ವಿವಿಧ ವಿಧಾನಗಳನ್ನು ಬಳಕೆ ಮಾಡುತ್ತೇವೆ.

– ಡಾ|| ಫಣಿ ರೇಣು

9845897069

ಲೇಖಕಿಯರ ಬಗ್ಗೆ

ಡಾ|| ಫಣಿ ರೇಣು ಅವರು ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ (MBBS),  ನಂತರ Post Graduation in Medical Cosmetologyನಲ್ಲಿ ಮಾಡಿದರು. ಅವರಿಗಿದ್ದ ವಾತ ರೋಗಕ್ಕೆ ಶಾಶ್ವತ ಪರಿಣಾಮ ಹುಡುಕುತ್ತಾ ಅಂಗಾಂಶದ ಪೋಷಣೆಯ  ವರ್ಧನೆಯ ಬಗ್ಗೆ ಸಂಶೋಧನೆ ಮಾಡಿದರು. ಅದರಿಂದ ಅವರಿಗೆ ಆದ ಸಕಾರಾತ್ಮಕ ಪರಿಣಾಮದಿಂದ ಅವರು ಬೇರೆಯವರಿಗೂ ಇದರಿಂದ ರೋಗ ಗುಣ ಮುಕ್ತರಾಗಲಿ ಎಂದು ಎವೊಲ್ವೆ ಆಂಟಿ-ಎಜೆಯಿಂಗ್ ಕ್ಲಿನಿಕ್ (Evolve Anti-Aging Clinic) ಸ್ಥಾಪಿಸಿದರು. ಹದಿ ಹರಯದ ಹುಡುಗ / ಹುಡುಗಿಯರಿಂದ ಹಿರಿಯರೂ ಕೂಡ ಈ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿದ್ದಾರೆ. ಇವರು  ನೈಸರ್ಗಿಕ ಪರಿಹಾರಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ.

 

Viva Healthy Coffee from Sripala Solutions

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ