ನವದೆಹಲಿ:ಜು-24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ ಜಮಾವಣೆ ಶೇ 80ರಷ್ಟು ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಸ್ವಿಸ್ ಬ್ಯಾಂಕ್ಗಳ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ‘ಠೇವಣಿಯೇತರ ಬಾಧ್ಯತೆಗಳು’, ಭಾರತದಲ್ಲಿರುವ ಸ್ವಿಸ್ ಬ್ಯಾಂಕ್ ಶಾಖೆಗಳು, ಅಂತರ್ ಬ್ಯಾಂಕ್ ವರ್ಗಾವಣೆ ಮತ್ತು ‘ವಿಶ್ವಾಸಾರ್ಹ ಬಾಧ್ಯತೆಗಳು’ ಸೇರಿದ್ದು, ಇತ್ತೀಚಿನ ಮಾಧ್ಯಮ ವರದಿಗಳು ವಾಸ್ತವಾಂಶವನ್ನು ತಿರುಚಿವೆ ಎಂದು ಮೂಲಗಳು ಹೇಳಿವೆ.
ಸ್ವಿಜರ್ಲೆಂಡ್ ಜತೆಗೆ ಭಾರತ ಸರಕಾರ ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ, ಸ್ವಿಸ್ ಬ್ಯಾಂಕ್ ಖಾತೆಗಳ ವಿವರ ಪಡೆಯುವ ಬಗ್ಗೆ 2017ರ ಡಿಸೆಂಬರ್ 21ರಂದು ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 2018ರ ಜನವರಿ 1ರಿಂದ ಬ್ಯಾಂಕುಗಳ ಅಂಕಿ-ಅಂಶಗಳನ್ನು ಭಾರತದ ಜತೆ ಹಂಚಿಕೊಳ್ಳುತ್ತಿದೆ.
2019ರ ಸೆಪ್ಟೆಂಬರ್ ಬಳಿಕ ವಾರ್ಷಿಕ ನೆಲೆಯಲ್ಲಿ ಅಂಕಿ-ಅಂಶಗಳನ್ನು ಸ್ವಿಸ್ ಬ್ಯಾಂಕ್ಗಳು ಭಾರತದ ಜತೆ ಹಂಚಿಕೊಳ್ಳಲಿವೆ ಎಂದು ಮೂಲಗಳು ಹೇಳಿವೆ.
Indian money in Swiss banks reduced by 80% after Modi government came to power