ಆಫ್ಘಾನಿಸ್ತಾನದಲ್ಲಿ ಐಎಸ್ ಉಗ್ರರ ಅಟ್ಟಹಾಸ

ಕಾಬೂಲ್, ಜು.23-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಆಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 16 ಮಂದಿ ಹತರಾಗಿ, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಫ್ಘಾನಿಸ್ತಾನ ಉಪಾಧ್ಯಕ್ಷ ಅಬ್ದುಲ್ ರಶೀದ್ ದೋಸ್ತಮ್ ಈ ಏರ್‍ಪೆÇೀರ್ಟ್‍ಗೆ ಆಗಮಿಸಿದ ಸ್ವಲ್ಪಹೊತ್ತಿನ ಬಳಿಕ ಈ ಮಾನವ ಬಾಂಬ್ ದಾಳಿ ನಡೆದಿದೆ. ಶಸ್ತ್ರಸಜ್ಜಿತ ಯೋಧರ ಬಿಗಿ ಭದ್ರತೆಯಲ್ಲಿ ಪ್ರಯಾಣಿಸುತ್ತಿದ್ದ ದೋಸ್ತಮ್ ಅವರಿಗೆ ಈ ದಾಳಿಯಲ್ಲಿ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ವಕ್ತಾರ ಬಷಿರ್ ಅಹಮದ್ ತಯಾಂಜ್ ತಿಳಿಸಿದ್ದಾರೆ.
ದೋಸ್ತಮ್ ಅವರನ್ನು ಸ್ವಾಗತಿಸಲು ರಾಜಕೀಯ ಮುಖಂಡರು, ಬೆಂಬಲಿಗರು ಹಾಗೂ ಸರ್ಕಾರದ ಉನ್ನತಾಧಿಕಾರಿಗಳು ವಿಮಾನನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲೇ ಈ ಕೃತ್ಯ ನಡೆದಿದೆ.
ಮಾನವ ಬಾಂಬರ್ ದಾಳಿಯ ತೀವ್ರತೆಗೆ 15ಕ್ಕೂ ಹೆಚ್ಚು ಜನರ ಮಂದಿ ಛಿದ್ರಛಿದ್ರವಾಗಿದ್ದು, ಅವರ ಮಾಂಸಖಂಡಗಳು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಐಎಸ್ ಉಗ್ರರ ಹಿಂಸಾಕೃತ್ಯದಲ್ಲಿ 16 ಮಂದಿ ಸಾವಿಗೀಡಾಗಿ, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭದ್ರತಾ ಪಡೆ ಮತ್ತು ಪೆÇಲೀಸ್ ಇಲಾಖೆಯ(ಸಂಚಾರ ವಿಭಾಗ) ಒಂಭತ್ತು ಸಿಬ್ಬಂದಿಯೂ ಈ ದಾಳಿಯಲ್ಲಿ ಹತರಾಗಿದ್ದಾರೆ. ಐಎಸ್ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಆಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ದುರುಪಯೋಗದ ಸಂಬಂಧ ದೋಸ್ತಮ್ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಟರ್ಕಿಯಿಂದ ವಿಮಾನದ ಮೂಲಕ ಕಾಬೂಲ್‍ಗೆ ಆಗಮಿಸುತ್ತಿದ್ದ ಅವರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ.
ದೋಸ್ತಮ್ 2017ರಿಂದ ಟರ್ಕಿಯಲ್ಲಿ ನೆಲೆಸಿದ್ದರು. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಬೆಂಬಲ ಪಡೆಯಲು ಅಧ್ಯಕ್ಷ ಅಶ್ರಫ್ ಘನಿ ಅವರೇ ದೋಸ್ತಮ್ ಸ್ವದೇಶಕ್ಕೆ ಹಿಂದಿರುಗಲು ಅನುವು ಮಾಡಿಕೊಟ್ಟಿದ್ದರು ಎನ್ನಲಾಗಿದೆ.
ಸರ್ಕಾರದ ಮೇಲೆ ಮತ್ತು ದೇಶದ ಉನ್ನತ ಮುಖಂಡರ ಮೇಲೆ ನಮಗೆ ನಂಬಿಕೆ ಇಲ್ಲ. ದೋಸ್ತಮ್ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ