
ಕಲಬುರಗಿ, ಜು.23-ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ 14 ಶಿಕ್ಷಕರನ್ನು ಆಲಂ ಠಾಣೆ ಪೆÇಲೀಸರು ಬಂಧಿಸಿ 83 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಆಳಂ ಪಟ್ಟಣದ ಲಾಡ್ಜ್ವೊಂದರಲ್ಲಿ ಹಲವು ಶಿಕ್ಷಕರು ರೂಮ್ ಪಡೆದು ಜೂಜಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಪೆÇಲೀಸರು ದಾಳಿ ಮಾಡಿದ್ದಾರೆ.
ಈ ವೇಳೆ 14 ಮಂದಿ ಶಿಕ್ಷಕರನ್ನು ಬಂಧಿಸಿ ಪಣಕ್ಕಿಟ್ಟಿದ್ದ 83ಸಾವಿರ ಹಣವನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.